ಮುಂಬೈ: ಬಾಲಿವುಡ್ ನ ನಾಯಕ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ಮದುವೆ ಆಗ್ತಿರೋ ಸುದ್ದಿ ಭಾರಿ ವೈರಲ್ ಆಗಿದೆ. ಇದು ಎಷ್ಟು ನಿಜವೋ ಏನೋ. ಆದರೆ ಈಗ ಒಂದು ಸುದ್ದಿ ಹೊರ ಬಿದ್ದಿದೆ. ಭಾವಿ ಪತ್ನಿ ಕತ್ರಿನಾಳಿಗಾಗಿಯೆ ವಿಕ್ಕಿ ಕೌಶಲ್ ಲಕ್ಷ ಲಕ್ಷ ಬಾಡಿಗೆಯ ಐಶಾರಾಮಿ ಮನೆಯನ್ನೇ ಹಿಡಿದಿದ್ದಾರಂತೆ. ಇದರ ಬಗ್ಗೆ ಇನ್ನಷ್ಟು ವಿಷಯ ಇದೆ. ಬನ್ನಿ ಹೇಳ್ತೀವಿ
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಲವ್ ಸ್ಟೋರಿ ಬಗ್ಗೆ ಈಗಾಗಲೇ ಭಾರಿ ಭಾರಿ ಸುದ್ದಿಗಳು ಹರಿದಾಡಿವೆ.ಇನ್ನೇನು ಇವರ ಮದುವೆ ಫಿಕ್ಸೇ ಆಗಿದೆ ಅನ್ನೋಮಟ್ಟಿಗೆ ನ್ಯೂಸ್ ಹರಡುತ್ತಿವೆ.ಹಾಗೇನೆ ವಿಕ್ಕಿ ಕೌಶಲ್ ಪತ್ನಿಗಾಗಿಯೆ ದುಬಾರಿ ಬಾಡಿಗೆ ಕೊಟ್ಟು ಐಶಾರಾಮಿ ಮನೆ ಹಿಡಿದಿದ್ದಾರಂತೆ.ಮುಂದಿನ ಐದು ವರ್ಷಕ್ಕೆ ಈ ಮನೆಯನ್ನ ಬಾಡಿಗೆಗೆ ತೆಗೆದುಕೊಂಡಿದ್ದಾರಂತೆ. ಮುಂಗಡವಾಗಿಯೇ 1.75 ಕೋಟಿ ರೂಪಾಯಿಗಳನ್ನಕೊಟ್ಟಿರೋ ಈ ಸುದ್ದಿ ಎಲ್ಲೆಡೆ ಅತಿ ಹೆಚ್ಚು ಕೇಳಿಬರುತ್ತಿದೆ.
PublicNext
09/11/2021 07:15 pm