ಹೈದ್ರಾಬಾದ್:ಟಾಲಿವುಡ್‌ನ ನಿರ್ದೇಶಕ ರಾಜಮೌಳಿ ಅವರ ಟ್ರಿಪಲ್ 'R' ಸಿನಿಮಾ ಸಣ್ಣಗೆ ಸದ್ದು ಮಾಡಲು ಶುರು ಮಾಡಿದೆ. ದಿನವೂ ಒಂದಿಲ್ಲ ಒಂದು ನ್ಯೂಸ್ ಹೊರ ಬೀಳ್ತಾನೆ ಇದೆ. ಪಕ್ಕಾ ಪ್ಲಾನ್ ಮಾಡಿಯೇ ಸಿನಿಮಾ ಪ್ರಚಾರ ಮಾಡೋ ನಿರ್ದೇಶಕ ರಾಜ್‌ಮೌಳಿ ಈಗ ಈ ಚಿತ್ರದ ಒಂದು ಹಾಡನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ರಾಜಮೌಳಿ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತವೇ ಇರುತ್ತವೆ. ಈ ಟ್ರಿಪಲ್ 'R' ಚಿತ್ರದಲ್ಲೂ ಕೀರವಾಣಿ ಸಂಗೀತದ ಮ್ಯಾಜಿಕ್ ಇದೆ. ನಾಯಕ ನಟರಾದ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್ ಟಿಆರ್ ಅವರ ಮೇಲೆ ಚಿತ್ರೀಕರಿಸಿದ ಹಾಡು ನವೆಂಬರ್-10 ರಂದು ಸಂಜೆ ನಾಲ್ಕು ಗಂಟೆಗೆ ರಿಲೀಸ್ ಆಗುತ್ತಿದೆ. ಅದನ್ನ ಹೇಳಿಕ್ಕೆ ಮಾಡಿರೋ ಸಾಂಗ್ ಪ್ರೊಮೊ ಈಗಲೇ ಭಾರಿ ಸೌಂಡ್ ಮಾಡುತ್ತಿದೆ.
PublicNext
09/11/2021 05:06 pm