ಬೆಂಗಳೂರು: ಇಂದು ದಿ. ನಟ ಪುನೀತ್ ರಾಜ್ ಕುಮಾರ್ ಸಮಾಧಿ ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೇ ಅಪ್ಪು ಮಡದಿ ಅಶ್ವಿನಿ ಸಮಾಧಿ ದರ್ಶನ ಪಡೆದಿದ್ದಾರೆ.ಪುನೀತ್ ಸಮಾಧಿ ನೋಡಲು ಅಭಿಮಾನಿಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.
ಸಮಾಧಿ ನೋಡಲು ದೂರದ ದಾವಣಗೆರೆ, ಚನ್ನಗಿರಿ, ಕುಣಿಗಲ್, ತುಮಕೂರಿನಿಂದ ಈಗಾಗಲೇ ಅಭಿಮಾನಿಗಳು ಬಂದಿದ್ದು, ಇನ್ನೂ ಬೇರೇ ಬೇರೇ ಜಿಲ್ಲೆಗಳಿಂದ ಬರುತ್ತಲೇ ಇದ್ದಾರೆ. ಇತ್ತ ಇಂದು ಅಪ್ಪು ಪತ್ನಿ ಅಶ್ವಿನಿ ಅವರು ಪುನೀತ್ ಸಮಾಧಿಗೆ ಭೇಟಿ ನೀಡಿ ಕೈ ಮುಗಿದಿದ್ದಾರೆ. ನಂತರ ಸಮಾಧಿಗೆ ಒಂದು ರೌಂಡ್ ಹಾಕಿ ಕೈ ಮುಗಿದು ಅಲ್ಲಿಂದ ತೆರಳಿದ್ದಾರೆ.
PublicNext
04/11/2021 03:15 pm