ಬೆಂಗಳೂರು: ಚಿರಂಜೀವಿ ಸರ್ಜಾ ಪತ್ನಿ ಹಾಗೂ ನಟಿ ಮೇಘನಾ ರಾಜ್ ಒಂದು ವಿಶೇಷ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಚಿರಂಜೀವಿ ಸರ್ಜಾ ಮತ್ತು ಪುನೀತ್ ಇಬ್ಬರೂ ಇದ್ದಾರೆ. ಇವರು ಕಲಿಸಿ ಹೋದ ಪಾಠವೇನೂ ಅಂತಲೂ ಮೇಘನಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
ಜೀವ ಮತ್ತು ಜೀವನ ಎರಡೂ ಶಾಶ್ವತ ಅಲ್ಲವೇ ಅಲ್ಲ. ಭವಿಷ್ಯಕಿಂತಲೂ ವರ್ತಮಾನದಲ್ಲಿಯೇ ನಂಬಿಕೆ ಇಟ್ಟ ಈ ಇಬ್ಬರೂ ನಮಗೆ ವಾಸ್ತವದ ಪರಿಚಯ ಮಾಡಿಸಿ ಹೋಗಿದ್ದಾರೆ. ಮುಂದೇನಾಗುತ್ತದೆ ಅನ್ನೋದಕ್ಕಿಂತಲೂ ಸದ್ಯ ನಾವು ಏನ್ ಮಾಡಬೇಕು ಅನ್ನೋದನ್ನ ಸ್ಯಾಂಡಲ್‌ವುಡ್ ನ ಈ ಎರಡು ಮುತ್ತುಗಳು ಕಲಿಸಿಕೊಟ್ಟಿವೆ ಅಂತಲೇ ಮೇಘನಾ ಬರೆದಿದ್ದಾರೆ. ಇವರ ಈ ಬರಹದ ಫೋಟೋ ಜನರ ಮನಸ್ಸಿಗೆ ಟಚ್ ಆಗುತ್ತದೆ.ಯಾಕೆಂದ್ರೆ ಹೆಚ್ಚು ಕಡಿಮೆ ಈ ಇಬ್ಬರು ನಾಯಕರು ಜೀವನವನ್ನ ಅಷ್ಟೇ ಪ್ರೀತಿಸಿದವ್ರು.ಜನರ ಜೊತೆಗೆ ಅಷ್ಟೇ ಪ್ರೀತಿಯಿಂದಲೇ ಇದ್ದು ಚಿಕ್ಕ ವಯಸ್ಸಿನಲ್ಲಿಯೇ ಹೊರಟು ಹೋಗಿದ್ದಾರೆ.
PublicNext
03/11/2021 09:15 pm