ಬೆಂಗಳೂರು:ಪುನೀತ್ ರಾಜಕುಮಾರ್ ಸಾವಿನಿಂದ ಇಡೀ ನಾಡು ಕಣ್ಣೀರು ಹಾಕಿದೆ. ಅಪ್ಪು ಅಂತಿಮ ದರುಶನ ಪಡೆಯಲು ಕಂಠೀರವ ಸ್ಟೇಡಿಯಂಗೆ ಲಕ್ಷಾಂತರ ಜನರೂ ಬಂದು ಹೋಗಿದ್ದಾರೆ. ಆದರೆ ಈಗ ಒಂದು ವಿಷಯ ಬೆಳಕಿಗೆ ಬಂದಿದೆ. ಅದು ಸಾರ್ವಜನಿಕರ ಚಪ್ಲಿಯ ವಿಷಯ. ಹೇಳ್ತಿವಿ ನೋಡಿ ಇತರ ಡಿಟೈಲ್ಸ್.
ಕಂಠೀರವ ಸ್ಟೇಡಿಯಂ ನಲ್ಲಿ ರಾಶಿ ರಾಶಿ ಚಪ್ಪಲಿಗಳು ಬಿದ್ದಿವೆ. ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಜನ ತಮ್ಮ ಚಪ್ಪಲಿಗಳನ್ನ ಹೊರಗಡೆ ಬಿಟ್ಟೇ ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ.
ಆದರೆ ವಾಪಸ್ ಹೋಗುವಾಗ ಎಲ್ಲರೂ ಚಪ್ಪಲಿಗಳನ್ನ ಧರಿಸಿಕೊಂಡು ಹೋಗಿಯೇ ಇಲ್ಲ. ಅದರ ಪರಿಣಾಮ ಕಂಠೀರವ ಸ್ಟೇಡಿಯಂ ನಲ್ಲಿ ರಾಶಿ ರಾಶಿ ಚಪ್ಪಲಿಗಳು ಬಿದ್ದಿವೆ. ಹೀಗೆ ಬಿದ್ದ ರಾಶಿ ಚಪ್ಪಲಿಗಳ ಪೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳಲಾಗಿದೆ. ಆದರೆ ಈಗ ಬಿಬಿಎಂಪಿ ಅಭಿಮಾನಿಗಳ ಆ ಎಲ್ಲ ಚಪ್ಪಲಿಗಳನ್ನ ತೆರವುಗೊಳಿಸಿದೆ.
PublicNext
02/11/2021 10:11 pm