ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಲ್ಪಾಯುಷಿ 'ಲೋಹಿತ್' ಪುನೀತ್ ಆದ್ರೂ ಉಳಿಯಲಿಲ್ಲ

ಬೆಂಗಳೂರು: ಪುನೀತ್ ರಾಜ ಕುಮಾರ್ ಇಹಲೋಕ ತ್ಯಜಿಸಿ ಹೋಗಿದ್ದಾರೆ. ಅಪಾರ ಅಭಿಮಾನಿಗಳ ಹೃದಯದಲ್ಲಿ ಎಂದೂ ಮರೆಯದ ಗಾಯ ಮಾಡಿ ಹೋಗಿದ್ದಾರೆ. ಪುನೀತ್ ಮೂಲ ಹೆಸರು ಲೋಹಿತ್. 'ಲೋಹಿತ್' ಅನ್ನೋದು ಅಲ್ಪಾಯುಷಿ ಹೆಸರು. ಇದನ್ನ ಬದಲಾಯಿಸಿ ಅಂತಲೇ ಹೇಳಿದ್ದರಂತೆ. ಅದಕ್ಕೇನೆ ಲೋಹಿತ್ ಆಗಿದ್ದ ಅಪ್ಪು ಮುಂದೆ ಪುನೀತ್ ಆದರು.ಈ ವಿಷಯವನ್ನ ಕುಮಾರ್ ಬಂಗಾರಪ್ಪ,ಭಾವುಕರಾಗಿ ಕಂಠೀರವ ಸ್ಟೇಡಿಯಂ ನಲ್ಲಿ ಹೇಳಿದ್ದಾರೆ. ನೀವೂ ಪುನೀತ್ ಅಭಿನಯದ ಬೆಟ್ಟದ ಹೂವು ಚಿತ್ರದ ಟೈಟಲ್ ಕಾರ್ಡ್ ಒಮ್ಮೆ ಈಗ ಗಮನಿಸಿ, ಅಲ್ಲಿ ಪುನೀತ್ ಅಂತಾನೇ ಇದೆ. ಆದರೆ ಬ್ರ್ಯಾಕೆಟ್ ನಲ್ಲಿ ಲೋಹಿತ್ ಅಂತಲೂ ಬರೆಯಲಾಗಿದೆ. ಹೆಸರೇನೋ ಬದಲಾಯಿತು. ನೇಮು-ಫೇಮು ಎಲ್ಲವೂ ಬಂದಾಯಿತು. ಸೂಪರ್ ಸ್ಟಾರ್ ಕೂಡ ಆದರು.ಆದರೆ 46 ನೇ ವಯಸ್ಸಿಗೆ ಪುನೀತ್ ಹೊರಟು ಹೋಗಿರೋದು, ಅಲ್ಪಾಯಿಷಿ ಲೋಹಿತ್ ನಂಬಿಕೆ ಸುಳ್ಳಾಗಲಿಲ್ಲ. ಅದು ನಿಜವಾಯಿತೇ ಅನ್ನೋದನ್ನ ಮನೆಯವರು ಕೇಳುವಂತೆ ಮಾಡಿದೆ.

Edited By :
PublicNext

PublicNext

31/10/2021 12:00 pm

Cinque Terre

55.82 K

Cinque Terre

10