ಬೆಂಗಳೂರು: ನಟ ಪುನೀತ್ ಪುತ್ರಿ ಧೃತಿ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದಿದ್ದಾರೆ. ಅಲ್ಲಿಂದ ಅವರು ನೇರವಾಗಿ ಪೊಲೀಸ್ ಎಸ್ಕಾರ್ಟ್ ಮೂಲಕ ಕಂಠೀರವ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ.
ನ್ಯೂಯಾರ್ಕ್ನಿಂದ ಇಂದು ಬೆಳಿಗ್ಗೆ ದೆಹಲಿಗೆ ಬಂದಿದ್ದ ಪುನೀತ್ ಪುತ್ರಿ ಧೃತಿ ನಂತರ ಅಲ್ಲಿಂದ ಸಂಜೆ 4-15ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. AI 502 ವಿಮಾನದ ಮೂಲಕ ಬೆಂಗಳೂರಿಗೆ ಬಂದಿರುವ ಧೃತಿ, ಅಲ್ಲಿಂದ ಕಂಠೀರವ ಕ್ರೀಡಾಂಗಣದತ್ತ ಪ್ರಯಾಣಿಸುತ್ತಿದ್ದಾರೆ.
PublicNext
30/10/2021 04:38 pm