ಬೆಂಗಳೂರು: ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ. ಇಂದು ಪುನೀತ್ ಗೆ ಲಘು ಹೃದಯಾಘಾತವಾಗುತ್ತಿದ್ದಂತೆ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದ್ರೆ ಚಿಕಿತ್ಸೆ ಫಲಕಾರಿಯಾಗಿಲ್ಲ.
ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಕೂಡಾ ಫಲಿಸಲಿಲ್ಲ.. ಕುಟುಂಬದ ಸದಸ್ಯರು ಸೇರಿದಂತೆ ಕನ್ನಡ ಚಿತ್ರ ರಂಗದ ಸ್ಟಾರ್ ನಟ ನಟಿಯರು ಆಸ್ಪತ್ರೆಯತ್ತ ಆಗಮಿಸಿದ್ದಾರೆ. ಕುಟುಂಬ ಸೇರಿದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ .
ಬಾಲ್ಯದಿಂದಲೇ ಉತ್ತಮ ನಟನೆಯಿಂದ ತಮ್ಮದೇ ಆದ ಫ್ಯಾನ್ಸ್ ಹೊಂದಿದ್ದ ಪುನೀತ್ ಉತ್ತಮ ನಟರು.
ಪುನೀತ್ ರಾಜ್ಕುಮಾರ್ 1975 ಮಾರ್ಚ್ 17 ರಂದು ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ ಜನಿಸಿದರು. ಇವರು ರಾಜಕುಮಾರ್ ದಂಪತಿಯ ಕಿರಿಯ ಪುತ್ರ.
ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು.ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ದ್ರಿತಿ ಮತ್ತು ವಂದಿತಾ.
PublicNext
29/10/2021 02:26 pm