ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರಿಗೆ ಹೃದಯಾಘಾತ ಆಗಿರುವ ಸುದ್ಧಿ ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ತುಂಬಾ ಆ್ಯಕ್ಟಿವ್ ಇದ್ದ ಪುನೀತ್ ರಾಜ್‍ಕುಮಾರಗೆ ಹೀಗೆ ಆಗಿರುವುದು ನಿಜಕ್ಕೂ ನೋವನ್ನುಂಟು ಮಾಡಿದೆ ಎಂದು ಚಿತ್ರನಟ ಹಾಗೂ ನಿರೂಪಕ ಮಾಸ್ಟರ್ ಆನಂದ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗ ತಾನೇ ಪ್ರೆಸ್ ಮೀಟ್ ಮುಗಿಸಿಕೊಂಡು ಊಟಕ್ಕೆ ಬಂದಿದ್ದೇವೆ. ಆದರೆ ಸುದ್ಧಿ ತಿಳಿಯುತ್ತಿದ್ದಂತೆ ಊಟ ಮಾಡಿರುವುದು ಜೀರ್ಣವಾಗಿಲ್ಲ .ನಿಜಕ್ಕೂ ಪವರ್ ಸ್ಟಾರ್ ಅವರಿಗೆ ಹೃದಯಾಘಾತ ಆಗಿರುವುದು ಸಾಕಷ್ಟು ನೋವು ತಂದಿದೆ. ಅವರು ಕೂಡಲೇ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
PublicNext
29/10/2021 01:12 pm