ಬೆಂಗಳೂರು : ಶಿವರಾಜ್ ಕುಮಾರ್ ನಟನೆಯ “ಭಜರಂಗಿ-2′ ಚಿತ್ರ ಇಂದು ಬಿಡುಗಡೆಯಾಗಿದೆ. ಇನ್ನು ಚಿತ್ರ ಬೆಳ್ಳಿ ತೆರೆಯಲ್ಲಿ ಪ್ರದಶರ್ನಗೊಳ್ಳುತ್ತಿದ್ದಂತೆ. ಇನ್ನು ಚಿತ್ರದ ಯಶಸ್ಸಿಗಾಗಿ ಶಿವಣ್ಣನ ಫ್ಯಾನ್ಸ್ ದೇವರ ಮೊರೆ ಹೋಗಿದ್ದಾರೆ. ವಿಶೇಷ ಅಂದ್ರೆ ಅಭಿಮಾನಿಗಳ ಈ ವಿಶೇಷ ಪೊಜೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಿದ್ದಾರೆ.
ಅಖಿಲ ಕರ್ನಾಟಕ ಡಾ ರಾಜಕುಮಾರ್ ಅಭಿಮಾನಿ ಸಂಘ, ಶಿವರಾಜ್ ಕುಮಾರ್ ಅಭಿಮಾನಿ ಸಂಘದ ವತಿಯಿಂದ ಮಾಗಡಿ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಪೂಜೆ ಬಳಿಕ ಅಭಿಮಾನಿಗಳು ನಟ ಶಿವರಾಜ್ ಕುಮಾರ್ ಗೆ ಬೆಳ್ಳಿ ಗದೆ ನೀಡಿದ್ದಾರೆ.
PublicNext
29/10/2021 09:59 am