ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಪ ಪಾಂಡು ಬಾಸ್ ಶಂಕರ್ ರಾವ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಕಿರುತೆರೆಯ ಹಾಸ್ಯ ಕಲಾವಿದ ಶಂಕರ್ ರಾವ್ ನಿಧನರಾಗಿದ್ದಾರೆ. ಪಾಪ ಪಾಂಡು ಹಾಸ್ಯ ಧಾರವಾಹಿಯ ಪಾಂಡು ಪಾತ್ರದ ಬಾಸ್ ಪಾತ್ರದಿಂದಲೇ ಹೆಚ್ಚು ಗಮನ ಸೆಳೆದಿದ್ದರು ಶಂಕರ್ ರಾವ್.

84 ವರ್ಷದ ಕಲಾವಿದ ಶಂಕರ್ ರಾವ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಕೂಡ ಕೊಡಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ 6.30 ರ ಸುಮಾರಿಗೆ ಅರಕೆರೆಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ರಂಗಭೂಮಿಯಲ್ಲೂ ಗುರುತಿಸಿಕೊಂಡಿದ್ದ ಇವರು, ಕಿರುತೆರೆಯಲ್ಲದೆ ಹಿರಿತೆರೆಯಲ್ಲೂ ಅಪ್ಪು, ಧ್ರುವ, ಖುಷಿ ಸಿನಿಮಾದಲ್ಲೂ ಅಭಿನಯಿಸಿದ್ದರು. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆದಿದೆ.

Edited By :
PublicNext

PublicNext

18/10/2021 03:18 pm

Cinque Terre

23.28 K

Cinque Terre

5