ಬೆಂಗಳೂರು:ಕೋಟಿಗೊಬ್ಬ -3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು, ಇಬ್ಬರು ವಿತರಕರ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ಚಿತ್ರಕ್ಕೆ ವಿತರಕರಿಂದಲೇ ಸಮಸ್ಯೆ ಆಗಿದೆ.ಅದರಿಂದ ಮೊದಲ ದಿನ 8 ರಿಂದ 10 ಕೋಟಿ ಲಾಸ್ ಆಗಿದೆ. ಅವರ ವಿರುದ್ಧ ಕಾನೂನು ಸಮರ ಮುಂದುವರೆಯುತ್ತದೆ ಅಂತಲೇ ಹೇಳಿದ್ದಾರೆ ಸೂರಪ್ಪ ಬಾಬು.
ಇಬ್ಬರು ವಿತರಕರು ಮಾಡಿರೋ ಕೆಲಸಕ್ಕೆ ಸಿನಿಮಾ ಮೊದಲ ದಿನ ರಿಲೀಸ್ ಆಗಲೇ ಇಲ್ಲ. ಇದರಿಂದ 8 ರಿಂದ 10 ಕೋಟಿ ಲಾಸ್ ಕೂಡ ಆಗಿದೆ. ಸಿನಿಮಾ ತಡೆಹಿಡಿದಿದ್ದರ ಹಿಂದೆ ದೊಡ್ಡ ಕಥೆ ಇದೆ. ಅದನ್ನ ದಾಖಲೆ ಸಮೇತ ಬಹಿರಂಗ ಪಡಿಸುತ್ತೇನೆ. ಸದ್ಯದಲ್ಲಿಯೆ ಸಂಬಂಧಿಸಿದವರ ವಿರುದ್ಧ ಮಾನನಷ್ಟ ಮೊಕ್ಕದ್ದಮೆನೂ ಹಾಕುತ್ತೇವೆ ಎಂದು ಸೂರಪ್ಪ ಬಾಬು ಖಾಸಗಿ ವಾಹಿನಿಯ ಕಿರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
PublicNext
16/10/2021 05:37 pm