ಕರೀನಾ ಕಪೂರ್ ಎರಡನೇ ಮಗುವಾದ ನಂತರ ಕ್ಯಾಟ್ ವಾಕ್ ಮಾಡಿದ್ದಾರೆ. ಲ್ಯಾಕ್ಮೆ ಫ್ಯಾಷನ್ ವೀಕ್ 2021ರಲ್ಲಿ ಶೋ ಸ್ಟಾಪರ್ ಆಗಿ ಕರೀನಾ ಮಿಂಚಿದ್ದಾರೆ. ಇನ್ನು ಕರೀನಾ ಫೋಟೋ ನೋಡಿದ ನೆಟ್ಟಿಗರು ಮಿಶ್ರ ಕಮೆಂಟ್ ಮಾಡಿದ್ದಾರೆ. ಇನ್ನು ವೀರೆ ದಿ ವೆಡ್ಡಿಂಗ್ ನಟಿ ದೇಹವನ್ನು ತಬ್ಬಿಕೊಳ್ಳುವ ಬಾಡಿಕಾನ್ ವೈಟ್ ಗೌನ್ ಧರಿಸಿದ ಬಾಲಿವುಡ್ ಬೇಬೊ ಫ್ಯಾಷನ್ ಗಾಲಾ ಸಮಾರಂಭದಲ್ಲಿ ಬಿಸಿ ಹೆಚ್ಚಿಸಿದ್ದರು.
ಸದ್ಯ ನಟಿಯ ಲುಕ್ ಕಂಡ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್ ಮಾಡುತ್ತಿದ್ದಾರೆ.ಇನ್ ಸ್ಟಾಗ್ರಾಮ್ ನಲ್ಲಿ ನೆಟಿಜನ್ ಗಳು ನಟಿಯನ್ನು ನಿರ್ದಯವಾಗಿ ಟ್ರೋಲ್ ಮಾಡಿದ್ದಾರೆ. ನಟಿಯನ್ನು ವಯಸ್ಸಾದವರು, ಚಾಚಿ, ಅಜ್ಜಿ ಮತ್ತು ಇನ್ನೂ ಹಲವು ರೀತಿಯಲ್ಲಿ ಕರೆದು ಟ್ರೊಲ್ ಮಾಡಿದ್ದಾರೆ
ನೆಟ್ಟಿಗರು ಮುಖ ನೋಡಿ ಚೌಕ ಆಗಿಬಿಟ್ಟಿದೆ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು ಛೀ ಅಜ್ಜಿಯಾಗಿಬಿಟ್ಟಿದ್ದೀರಿ ಎಂದು ಹೇಳಿದ್ದಾರೆ.
PublicNext
12/10/2021 06:58 pm