ಬೆಂಗಳೂರು: ಸಲಗ ಹಾಗೂ ಭಜರಂಗಿ ಚಿತ್ರದ ಪೈರಸಿ ತಡೆಗಾಗಿ ಪೋಲೀಸ್ ಕಮಿಷನರ್ ಕಮಲ್ ಪಂಥ್ ಮತ್ತು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲರಿಗೆ ಚಿತ್ರದ ನಿರ್ಮಾಪಕರು ಲಿಖಿತ ರೂಪದ ಮನವಿ ಸಲ್ಲಿಸಿದ್ದಾರೆ. ಪೈರಸಿ ಎಲ್ಲ ಚಿತ್ರಗಳನ್ನೂ ಈಗೀಗ ಕಾಡುತ್ತಲೇ ಇದೆ. ದೊಡ್ಡ ಚಿತ್ರಗಳು ಬಂದ್ರಂತು ರಿಲೀಸ್ ದಿನವೇ ಆಯಾ ಚಿತ್ರಗಳು ಪೈರಸಿ ಆಗುತ್ತವೆ.
ಈ ಹಿನ್ನೆಲೆಯಲ್ಲಿಯೇ ಈಗ ಕನ್ನಡದ ಸಿನಿಮಾ ನಿರ್ಮಾಪಕರು ಮೊದಲೇ ಅಲರ್ಟ್ ಆಗಿದ್ದಾರೆ.
ಇದೇ ಅಕ್ಟೋಬರ್ -14 ರಂದು ಸುದೀಪ್ ಅಭಿನಯದ ಕೋಟಿಗೊಬ್ಬ 3 ರಿಲೀಸ್ ಆಗುತ್ತಿದೆ.ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರೋ ಸಲಗ ಚಿತ್ರವೂ ತೆರೆ ಕಾಣುತ್ತಿದೆ. ಈ ಚಿತ್ರಗಳ ಅಬ್ಬರದ ಬಳಿಕ ಅಕ್ಟೋಬರ್ -29 ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಬಿಡುಗಡೆ ಆಗುತ್ತಿದೆ.
ಹಾಗಾಗಿಯೇ ಇವತ್ತು ಭಜರಂಗಿ -2 ಚಿತ್ರದ ನಿರ್ಮಾಪಕ ಜಯಣ್ಣ ನಿರ್ಮಾಪಕ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಮತ್ತು ನಿರ್ಮಾಪಕ ಕೆ.ಮಂಜು ಇವತ್ತು ಪೊಲೀಸ್ ಕಮಿಷ್ನರ್ ಕಮಲ್ ಪಂಥ್ ಹಾಗೂ ಸಿಸಿಬಿ ಜಂಟಿ ಕಮಿಷ್ನರ್ ಸಂದೀಪ್ ಪಾಟೀಲ್ ಗೆ ಪೈರಸಿ
ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
PublicNext
01/10/2021 06:05 pm