ವಯಸ್ಸು ಅನ್ನೋದು ಜಸ್ಟ್ ನಂಬರ್ ಅನ್ನೋದನ್ನ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಈಗಾಗಲೇ ಸಾಬೀತುಪಡಿಸಿ ತೋರಿಸಿದ್ದಾರೆ. ಪಡ್ಡೆ ಹುಡುಗರ ಆದಿಯಾಗಿ ಅಂಕಲ್‌ಗಳ ವರೆಗೆ ಎಲ್ಲ ಪುರುಷರ ಹೃದಯ ಗೆದ್ದ ಸಹಜ ಸುಂದರಿ ಈಕೆ. ಈಗ ರಿಯಾಲಿಟಿ ಷೋನಲ್ಲಿ ಬ್ಯುಸಿ ಆಗಿರುವ ಮಾರ್ಜಾಲ ಕಣ್ಣಿನ ಸುಂದರಿ ಈ ಬಾರಿ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ.
ಈ ವಾರದ ರಿಯಾಲಿಟಿ ಷೋ ಕಾರ್ಯಕ್ರಮಕ್ಕೆ ಮಾಧುರಿ ದೀಕ್ಷಿತ್ 75 ಸಾವಿರ ರೂ.ಮೌಲ್ಯದ ಚೆರ್ರಿ ರೆಡ್ ಘರಾರಾ ಡ್ರೆಸ್ ನಲ್ಲಿ ಮಿಂಚಿದ್ದರು. ಈ ಡ್ರೆಸ್ ಪುನಿತ್ ಬಾಲಾನ ಎಂಬ ವಸ್ತ್ರ ವಿನ್ಯಾಸಕರು ಡಿಸೈನ್ ಮಾಡಿದ್ದು, ಅವರ ವೆಬ್‍ಸೈಟ್ ನಲ್ಲಿ ಲಭ್ಯವಿದೆ. ಇನ್ನು ಈ ಡ್ರೆಸ್ ಧರಿಸಿದ ಮಾಧುರಿ ದೀಕ್ಷಿತ್ ತಾವೇ ನಟಿಸಿದ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
PublicNext
01/09/2021 01:26 pm