'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಿನಿಮಾದ ಆಚೆಗೂ ರಶ್ಮಿಕಾ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ. ಸದ್ಯ ಇನ್ ಸ್ಟಾಗ್ರಾಮ್ ನಲ್ಲಿ ಬ್ಯೂಟಿಫುಲ್ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಒಂದು ಹೊಸ ವಿಷಯವನ್ನು ಹೇಳಿದ್ದಾರೆ ರಶ್ಮಿಕಾ.
ಹೌದು, ರಶ್ಮಿಕಾಗೆ ಇನ್ ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 2 ಕೋಟಿ ಬೆಂಬಲಿಗರು ಆಗಿದ್ದಾರೆ. ಈ ವಿಚಾರವನ್ನು ಹೊಸ ಫೋಟೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.ಅಂದಹಾಗೆ, ಈ ಸಂಭ್ರಮಕ್ಕೆ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ಕೀರ್ತಿ ಸುರೇಶ್, ಎಲೀ ಅವ್ ರಾಮ್, ಆಶಿಕಾ ರಂಗನಾಥ್, ಸಂಯುಕ್ತಾ ಹೊರನಾಡು ಸೇರಿದಂತೆ ಅನೇಕರು ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಅಂದಹಾಗೆ, ಇನ್ ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನ ಕಾಜಲ್ ಅಗರ್ವಾಲ್ ಗೆ ಸಿಕ್ಕಿದೆ. ಅವರಿಗೆ 19.3 ಮಿಲಿಯನ್ ಫಾಲೋವರ್ಸ್ ಇದ್ದಾರೆ. ರಶ್ಮಿಕಾಗಿಂತ ಮೊದಲು, ನಂಬರ್ 1 ಪಟ್ಟದಲ್ಲಿ ಕಾಜಲ್ ಇದ್ದರು. ಕೆಲ ದಿನಗಳ ಹಿಂದಷ್ಟೇ ರಶ್ಮಿಕಾಗೆ 19.4 ಮಿಲಿಯನ್ ಫಾಲೋವರ್ಸ್ ಇದ್ದರು. ಈಗ ಅದು 20 ಮಿಲಿಯನ್ (2 ಕೋಟಿ) ಮುಟ್ಟಿದೆ.
ಇನ್ನು, ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ನ 'ಮಿಷನ್ ಮಜ್ನು' ಮತ್ತು ಅಮಿತಾಭ್ ಬಚ್ಚನ್ ಅವರ 'ಗುಡ್ ಬೈ' ಸಿನಿಮಾಗಳಲ್ಲೂ ರಶ್ಮಿಕಾ ಬ್ಯುಸಿ ಆಗಿದ್ದಾರೆ.
PublicNext
10/08/2021 05:51 pm