ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೈನ್ ಟ್ಯೂಮರ್ ನಿಂದ ಮಲಯಾಳಂ ನಟಿ ಸಾವು

ತಿರುವನಂತಪುರಂ : ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಶರಣ್ಯ ಶಶಿ ಇಂದು ನಿಧನರಾಗಿದ್ದಾರೆ. 2012 ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿದ್ದು, 11 ಮೇಜರ್ ಸರ್ಜರಿಗೆ ಒಳಗಾಗಿದ್ದರು. ಮೇ 23 ರಂದು ಅವರಿಗೆ ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಚಿಕಿತ್ಸೆಗಾಗಿ ಹಣಕಾಸು ಕೊರತೆ ಉಂಟಾದ ಸಂದರ್ಭದಲ್ಲಿ ಸಿನಿರಂಗದ ಕಲಾವಿದರಿಂದ ಅವರು ನೆರವು ಪಡೆದುಕೊಂಡಿದ್ದರು. ನಿಯಮಿತವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮತ್ತೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಲಯಾಳಂ, ತಮಿಳು ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್ಯ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳು ಚಿತ್ರ 'ಪಚೈ'ನಲ್ಲಿ ಶರಣ್ಯ ಶಶಿ ಪಾತ್ರ ನಿರ್ವಹಿಸಿದ್ದಾರೆ. ಮೋಹನ್ ಲಾಲ್ ಅವರ 'ಚೋಟಾ ಮುಂಬೈ', 'ತಾಳಪ್ಪವು', 'ಬಾಂಬೆ ಮಾರ್ಚ್ 12', 'ಮರಿಯಾ ಕಲಿಪ್ಪಿನಾಲು' ಸೇರಿದಂತೆ ಅನೇಕ ಮಲಯಾಳಂ ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.

Edited By : Nirmala Aralikatti
PublicNext

PublicNext

09/08/2021 07:11 pm

Cinque Terre

40.1 K

Cinque Terre

0