ಮುಂಬೈ : ನಟ, ನಟಿಯರು ಏನು ಮಾಡಿದ್ರು ಸುದ್ದಿಯಾಗುತ್ತದೆ. ಅದರಲ್ಲಿಯೂ ತಾರಾ ದಂಪತಿಯಾದರಂತೂ ಮುಗಿದೇ ಹೋಯ್ತು ಅಭಿಮಾನಿಗಳು ಆ ಜೋಡಿ ಮೇಲೆ ಕಣ್ಣಿಟ್ಟಿರುತ್ತಾರೆ. ಸದ್ಯ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬೈನ ಹಿಂದುಜಾ ಆಸ್ಪತ್ರೆಗೆ ಗುಟ್ಟಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಇವರ ಫೋಟೋ ಭಾರಿ ವೈರಲ್ ಆಗಿದೆ. ದೀಪಿಕಾ ಗರ್ಭಿಣಿಯಾಗಿದ್ದಾರೆ ಎಂದು ಚರ್ಚೆ ಶುರುವಾಗಿದೆ! ಈ ವೈರಲ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಇದರ ಬಗ್ಗೆ ಗುಸುಗುಸು ಶುರು ಮಾಡಿದ್ದು, ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಸುದ್ದಿ ಮಾಡಿದ್ದಾರೆ.
ದೀಪಿಕಾ ಹಾಗೂ ರಣ್ವೀರ್ ಒಟ್ಟಿಗೆ ಅಭಿನಯಿಸಿದ್ದ ರಾಮಲೀಲಾ ಸಿನಿಮಾ ಇಬ್ಬರಿಗೂ ಭಾರಿ ಹೆಸರು ತಂದುಕೊಟ್ಟಿತ್ತು. ನಂತರ ಬಾಜೀರಾವ್ ಮಸ್ತಾನಿ ಹಾಗೂ ಪದ್ಮಾವತ್ ಸಿನಿಮಾ ಕೂಡ ಸೂಪರ್ಹೊಟ್ ಆಗಿದ್ದು, ಇದೀಗ ಈ ಜೋಡಿಯ ಬಗ್ಗೆ ಅಭಿಮಾನಿಗಳ ಕಣ್ಣು ನೆಟ್ಟಿದೆ.
PublicNext
01/08/2021 03:31 pm