ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕನ್ನಡದ ಬಿಗ್‌ಬಾಸ್ 8ನೇ ಆವೃತ್ತಿಯು ಭರ್ಜರಿಯಾಗಿ ಆರಂಭಗೊಂಡಿದೆ. ಬಿಗ್‌ಬಾಸ್ ತಂಡ ಈಗಾಗಲೇ ಪ್ರಕಟಿಸಿರುವಂತೆ ಈ ಆವೃತ್ತಿಯಲ್ಲಿ ಸೆಲೆಬ್ರಿಟಿಗಳೇ ಇದ್ದಾರೆ.
ಈ ಬಾರಿಯ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಟಿಕ್ ಟಾಕ್ ಖ್ಯಾತಿಯ ಧನುಶ್ರೀ ಎಂಟ್ರಿ ಕೊಟ್ಟಿದ್ದಾರೆ. ಹಾಸನದ ಹುಡುಗಿ ಧನುಶ್ರೀ ಜ್ಯೂನಿಯರ್ ನಿತ್ಯಾ ಮೆನನ್ ಎಂದೇ ಕರೆಸಿಕೊಂಡವರು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಬಳಿಕ ನಟಿ ಶುಭಾ ಪೂಂಜಾ, ಶಂಕರ್ ಅಶ್ವಥ್, ವಿಶ್ವನಾಥ್ ಹಾವೇರಿ, ವೈಷ್ಣವಿ ಈಗಾಗಲೇ ದೊಡ್ಮನೆಗೆ ಕಾಲಿಟ್ಟಿದ್ದಾರೆ.
PublicNext
28/02/2021 08:03 pm