ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕನ್ ಬಿರಿಯಾನಿ ಮಾಡಿ ಫೋಟೋ ಹಂಚಿಕೊಂಡ ರಾಗಿಣಿ

ಬೆಂಗಳೂರು: ಜೈಲಿಂದ ಹೊರ ಬಂದ ಮೇಲೆ ನಟಿ ರಾಗಿಣಿ ಲವಲವಿಕೆಯಿಂದ ಕಾಲ ಕಳೆಯುತ್ತಿದ್ದಾರೆ. ಈಗ ಚಿಕನ್ ಬಿರಿಯಾನಿ ಮಾಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದು ಮನೆಗೆ ಮರಳಿದ ನಂತರ ನಟಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ರಾಗಿಣಿ ಮನೆಯಲ್ಲೇ ಅಪ್ಪ-ಅಮ್ಮನೊಂದಿಗೆ ಪ್ರೇಮಿಗಳ ದಿನ ಆಚರಿಸಿದ್ದಾರೆ. ಅಪ್ಪ-ಅಮ್ಮನಿಗೆ ರುಚಿಯಾದ ಅಡುಗೆ ಮಾಡಿಕೊಟ್ಟು, ಅಮ್ಮನ ಕೈಯಿಂದ ಕೇಕ್ ಕತ್ತರಿಸಿದ್ದಾರೆ. ಈ ಫೋಟೋವನ್ನು ಹಂಚಿಕೊಂಡು ನನ್ನ ಯಾವ ಜನ್ನದ ಪುಣ್ಯವೋ ನಿಮ್ಮನ್ನು ನನ್ನ ಪೋಷಕರಾಗಿ ಪಡೆದಿದ್ದೆನೆ. ಅಡುಗೆ ಮಾಡಲು ಖುಷಿಯಾಗುತ್ತದೆ. ಈ ದಿನ ನನಗೆ ತುಂಬಾನೆ ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

16/02/2021 06:52 pm

Cinque Terre

55.22 K

Cinque Terre

3