ಚಾಲೆಂಜಿಂಗ್ ಸ್ಟಾರ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮಲ್ಲಿರುವ ನಟಿನಿಗೆ ಸ್ಯಾಂಡಲ್ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಬರ್ತ್ ಡೇಗೆ ಶುಭ ಕೋರುತ್ತಿದ್ದಾರೆ. ಕನ್ನಡ ಸಿನಿರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್ ಎಂದರೆ ತಪ್ಪಾಗದು.
ಪ್ರತಿ ವರ್ಷ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಕೆಲವು ದಿನಗಳು ಇರುವಾಗಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಡಿಬಾಸ್ ಹೆಸರಲ್ಲಿ ಸಂಭ್ರಮಿಸೋಕೆ ಆರಂಭಿಸುತ್ತಾರೆ. ಸತತವಾಗಿ ಹಲವಾರು ದಿನಗಳು ದರ್ಶನ್ ಅವರ ಹುಟ್ಟುಹಬ್ಬದ ವಿಷಯ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿರುತ್ತದೆ. ಇನ್ನು ಈ ಸಲ ದರ್ಶನ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಜೊತೆಗೆ ಅವರು ಬೆಂಗಳೂರಿನಲ್ಲಿ ಇರುವುದೂ ಇಲ್ಲ. ಈ ವಿಷಯವನ್ನು ಈ ಹಿಂದೆ ಫೇಸ್ ಬುಕ್ ಲೈವ್ ಬಂದಾಗ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ಇನ್ನು ಇಂದು ದರ್ಶನ್ ಅವರ ಹುಟ್ಟುಹಬ್ಬ. ಬಾಸ್ ಪರ್ವ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅದನ್ನು ಆಚರಿಸುತ್ತಿದ್ದಾರೆ. ಈಗಾಗಲೇ ಡಿಬಾಸ್ ದರ್ಶನ್ ಅವರ ಹುಟ್ಟುಹಬ್ಬದ ವಿಷಯ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದೆ.
PublicNext
16/02/2021 08:52 am