ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಹಾಗೂ ನಟ ದಿ. ಚಿರಂಜೀವಿ ಪುತ್ರನ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದೆ.
ಇಂದು ಬೆಳಿಗ್ಗೆ ನಟಿ ಮೇಘನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಜ್ಯೂನಿಯರ್ ಚಿರುವಿನ ಫೋಟೊ ರಿವೀಲ್ ಮಾಡಿದ್ದಾರೆ. ಪ್ರೇಮಿಗಳ ದಿನದಂದೇ ತಮ್ಮ ಪ್ರೇಮದ ಕಾಣಿಕೆಯ ಪುತ್ರನ ಫೋಟೋ ಹಂಚಿಕೊಂಡಿದ್ದು ವಿಶೇಷವಾಗಿದೆ.
ಕಳೆದ ವರ್ಷ ಅಕ್ಟೋಬರ್ 22ರಂದು ಜ್ಯೂನಿಯರ್ ಚಿರು ಜನನವಾಗಿತ್ತು. ಆಗ ನವಜಾತ ಕಂದನ ಫೋಟೊ ಅಪ್ಲೋಡ್ ಮಾಡಿದ್ದ ಮೇಘನಾ ಸುಮಾರು 5 ತಿಂಗಳ ನಂತರ ಇದೇ ಮೊದಲ ಬಾರಿಗೆ ಮುಗ್ಧ ಪ್ರಸನ್ನ ನಗುವಿನ ಕಂದನ ಫೋಟೊ ರಿವೀಲ್ ಮಾಡಿದ್ದಾರೆ. ಸದ್ಯ ಜ್ಯೂನಿಯರ್ ತನ್ನ ತಂದೆಯ ಅಭಿಮಾನಿಗಳಿಗೆ ಹಾಯ್, ಹಲೋ ಹೇಳಿದಂತೆ ಕಾಣುತ್ತಿದ್ದಾನೆ.
PublicNext
14/02/2021 08:12 am