ಬಾಲಿವುಡ್ ನಟಿ, ನಿರ್ಮಾಪಕಿ ದಿಯಾ ಮಿರ್ಜಾ ಅವರ ದಾಂಪತ್ಯ ಕಳೆದ ವರ್ಷ ಮುರಿದುಬಿದ್ದಿತ್ತು. ಸಾಹಿಲ್ ಸಂಘ ಅವರ ಜೊತೆಗಿನ ಐದು ವರ್ಷದ ವೈವಾಹಿಕ ಬದುಕಿಗೆ ನಟಿ ದಿಯಾ ಅಂತ್ಯವಾಡಿದ್ದರು. ಪರಸ್ಪರ ಒಪ್ಪಿಗೆ ಮೆರೆಗೆ ಕೊರ್ಟ್ನಲ್ಲಿ ಡಿವೋರ್ಸ್ ಪಡೆದು ದೂರವಾದರು. ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ನಟಿ ದಿಯಾ ಮತ್ತೊಮ್ಮೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಹಲವು ದಿನಗಳಿಂದ ವೈಭವ್ ಶೇಖಿ ಎನ್ನುವರ ಜೊತೆ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು.
ಇದೀಗ, ಈ ಪ್ರೀತಿ ಮದುವೆವರೆಗೂ ಬಂದಿದೆ. ಮುಂಬೈ ಮೂಲದ ಉದ್ಯಮಿ ಜೊತೆ ಫೆಬ್ರವರಿ 15ಕ್ಕೆ ವಿವಾಹವಾಗಲಿದ್ದಾರೆ ಎಂದು ''Spotboye'' ವೆಬ್ಸೈಟ್ ವರದಿ ಮಾಡಿದೆ.
ನಟಿ ದಿಯಾ ಮಿರ್ಜಾ ಮತ್ತು ಉದ್ಯಮಿ ವೈಭವ್ ಶೇಖಿ ಅವರ ಮದುವೆ ಫೆಬ್ರವರಿ 15 ರಂದು ಸೋಮವಾರ ನಡೆಯಲಿದೆ. ಇದು ಖಾಸಗಿ ಕಾರ್ಯಕ್ರಮವಾಗಿದ್ದು, ಕೆಲವೇ ಕೆಲವು ಸಂಬಂಧಿಕರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದೆ.
2014ರ ಅಕ್ಟೋಬರ್ 18ರಂದು ಸಪ್ತಪದಿ ತುಳಿದಿದ್ದ ದಿಯ ಐದು ವರ್ಷ ಒಟ್ಟಿಗೆ ದಾಂಪತ್ಯ ನಡೆಸಿ ದಿಯಾ ಮತ್ತು ಸಾಹಿಲ್ ಒಪ್ಪಿಗೆ ಮೆರೆಗೆ 2019ರಲ್ಲಿ ಡಿವೋರ್ಸ್ ಪಡೆದುಕೊಂಡರು.
PublicNext
13/02/2021 08:48 pm