ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಇದು ನನ್ನ ಕೊನೆಯ ಪೋಸ್ಟ್' ಎಂದು ಪ್ರಾಣ ಬಿಟ್ಟ ಟಿಕ್‌ಟಾಕ್ ಸ್ಟಾರ್‌

ವಾಷಿಂಗ್ಟನ್: ಅಮೆರಿಕದ ಟಿಕ್‌ಟಾಕ್ ಸ್ಟಾರ್‌ ಡಜಾರಿಯಾ ಕ್ವಿಂಟ್ ನೊಯೆಸ್ ಕೇವಲ ೧೮ನೇ ವಯಸ್ಸಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಟಿಕ್​ಟಾಕ್​ನಲ್ಲಿ ಅಂತಿಮ ವೀಡಿಯೋವನ್ನು ಪೋಸ್ಟ್ ಮಾಡಿದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡೀ ಹೆಸರಿನ ಮೂಲಕವೇ ಡಜಾರಿಯಾ ಖ್ಯಾತಿ ಪಡೆದುಕೊಂಡಿದ್ದರು. ಟಿಕ್​ಟಾಕ್​ನಲ್ಲಿ ಬರೋಬ್ಬರಿ 14 ಲಕ್ಷ ಫಾಲೋವರ್​​ಗಳನ್ನು ಹೊಂದಿದ್ದರು. ಇತ್ತೀಚೆಗೆ ಇದು ನನ್ನ ಕೊನೆಯ ಪೋಸ್ಟ್​ ಎಂದು ಹೇಳಿಕೊಂಡಿದ್ದ ಅವರು, ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಜಾರಿಯಾ ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾತು ಈಗ ಕೇಳಿ ಬಂದಿದೆ. ಸದಾ ಸಾಮಾಜಿಕ ಜಾಲತಾಣದಲ್ಲೇ ಕಾಲ ಕಳೆಯುತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಖಿನ್ನತೆಯೇ ಕಾರಣವಾ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಕುಟುಂಬದವರಿಂದಲೂ ಹೇಳಿಕೆ ಪಡೆದಿದ್ದಾರೆ.

Edited By : Vijay Kumar
PublicNext

PublicNext

11/02/2021 09:00 pm

Cinque Terre

88.57 K

Cinque Terre

2

ಸಂಬಂಧಿತ ಸುದ್ದಿ