ನವದೆಹಲಿ: ವೆಬ್‌ಸೈಟ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಜನಪ್ರಿಯ ವೆಬ್ ಸರಣಿ ನಟಿ ಗೆಹಾನಾ ವಸಿಷ್ಠರನ್ನು ಇತ್ತೀಚೆಗೆ ಬಂಧಿಸಲಾಗಿದೆ. ‘ಗಾಂಧಿ ಬಾತ್’ ನಟಿ ಗೆಹಾನಾ ಅವರನ್ನು ಇಂದು ಮುಂಬೈನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ವರದಿಯಾಗಿದೆ.
ಎಲ್ಲದರ ಮಧ್ಯೆ ವೆಬ್ ಸರಣಿ ನಟಿ ಹಾಗೂ ತಂಡ ಇತ್ತೀಚೆಗೆ ಗೆಹಾನಾ ವಸಿಷ್ಠ ಪರವಾಗಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. “ಗೆಹಾನಾ ವಸಿಷ್ಠ ಅಲಿಯಾಸ್ ವಂದನಾ ತಿವಾರಿ ಸಂಪೂರ್ಣವಾಗಿ ನಿರಪರಾಧಿ. ಅವಳು ಯಾವುದೇ ಅಶ್ಲೀಲ ಚಲನಚಿತ್ರ ದಂಧೆಯಲ್ಲಿ ಭಾಗಿಯಾಗಿಲ್ಲ. ತನ್ನ ಕಂಪನಿಯ ಜಿವಿ ಸ್ಟುಡಿಯೋಸ್‌ನ ನಿರ್ಮಾಪಕ ಮತ್ತು ನಿರ್ದೇಶಕರಾಗಿ, ಅವರು ಕಾನೂನಿನಲ್ಲಿ ಅನುಮತಿಸುವ ಚಲನಚಿತ್ರಗಳನ್ನು ಮಾತ್ರ ನಿರ್ಮಿಸಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
''ನ್ಯಾಯಾಂಗ ಮತ್ತು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ದುರದೃಷ್ಟವಶಾತ್ ವಿಶ್ವದ ಅತ್ಯುತ್ತಮ ಪೊಲೀಸ್ ಪಡೆಯಾಗಿರುವ ಮುಂಬೈ ಪೊಲೀಸರು ಬ್ಲೂ ಫಿಲಂ ತಯಾರಕರೊಂದಿಗೆ ಸೇರಿ ಗೆಹೆನಾ ಹೆಸರನ್ನು ಸೇರಿಸಿದ್ದಾರೆ'' ಎಂದು ಆರೋಪಿಸಲಾಗಿದೆ.
ಗೆಹಾನಾ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಮತ್ತು ‘ವ್ಯಾಪಾರ ಸ್ಪರ್ಧಿಗಳು’ ಅವರನ್ನು ಬಲಿಪಶು ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ಬಹಿರಂಗಪಡಿಸಲಾಗಿದೆ. ಅಷ್ಟೇ ಅಲ್ಲದೆ "ಅವಳನ್ನು ಸುಳ್ಳು ಆರೋಪದ ಮೂಲಕ ಸಿಕ್ಕಿಹಾಕಿಸಲಾಗುತ್ತಿದೆ ಅಥವಾ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ವ್ಯಾಪಾರ ಸ್ಪರ್ಧಿಗಳು ಅವಳನ್ನು ದೂಷಿಸಲು ಹೊರಟಿದ್ದಾರೆ'' ಎಂದು ಆರೋಪಿಸಲಾಗಿದೆ.
PublicNext
08/02/2021 04:07 pm