ಬೆಂಗಳೂರು: ಡ್ರಗ್ಸ್ ಕೇಸ್ ಆರೋಪಿಯಾಗಿ ಜೈಲು ಸೇರಿದ್ದ ನಟಿ ರಾಗಿಣಿ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದರು. ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿರುವ ರಾಗಿಣಿ ಮನೆಯಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ಜೈಲಿಂದ ಮನೆಗೆ ಬಂದ ಮೇಲೆ ರಾಗಿಣಿ ಪೋಷಕರು ಈ ಪುಸ್ತಕಗಳನ್ನು ಗಿಫ್ಟ್ ಕೊಟ್ಟಿದ್ದಾರೆ. ತಾವು ಪುಸ್ತಕ ಓದುತ್ತಿರುವ ಕೆಲವು ಪೋಟೋಗಳನ್ನು ರಾಗಿಣಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕೆಲವು ಮೋಟಿವೇಶನ್ ಮಾತುಗಳನ್ನು ಕೂಡ ಬರೆದಿದ್ದಾರೆ.
PublicNext
03/02/2021 04:24 pm