ರಾಕಿಂಗ್ ಸ್ಟಾರ್ ಯಶ್ ಅವರು ಕುಟುಂಬ ಸಮೇತರಾಗಿ ಮಾಲ್ಡೀವ್ಸ್ಗೆ ಪ್ರವಾಸಕ್ಕೆ ತೆರಳಿದ್ದಾರೆ. ಕಳೆದ ಮೂರು ದಿನಗಳಿಂದ Maldives ಕಡಲ ಕಿನಾರೆಯಲ್ಲಿ ಮೋಜು ಮಸ್ತಿಯ ಮಸ್ತ್ ಮಸ್ತ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೋವಿಡ್ ಆತಂಕದ ನಡುವೆಯೂ ಅವರು ಪುಟ್ಟ ಮಕ್ಕಳನ್ನು ಈ ಪುಟ್ಟ ದ್ವೀಪಕ್ಕೆ ಏಕೆ ಕರೆದೊಯ್ದರು? ಎಂಬ ಈ ಪ್ರಶ್ನೆ ಯಶ್ ಅಭಿಮಾನಿಗಳ ವಲಯದಲ್ಲಿ ಕೇಳಿ ಬಂದಿತ್ತು. ಈ ಪ್ರಶ್ನೆಗೆ ಕ್ಲಿಯರ್ ಉತ್ತರ ಇಲ್ಲಿದೆ.
ಯಶ್ -ರಾಧಿಕಾ ದಂಪತಿ ತಮ್ಮ ಪುಟಾಣಿ ಮಕ್ಕಳೊಂದಿಗೆ ಈಗ ಫುಲ್ ಮೋಜು- ಮಸ್ತಿ ಮೂಡ್ನಲ್ಲಿದ್ದಾರೆ. ಭೂಮಿ ಮೇಲಿನ ಸ್ವರ್ಗದಂತಿರುವ ನೀಲಿ ಕಡಲ ತೀರದ ಐಷಾರಾಮಿ ದ್ವೀಪದಲ್ಲಿ ಅವರು ಸಮಯ ಕಳೆಯುತ್ತಿದ್ದಾರೆ. ಕೆಜಿಎಫ್ 2 ಶೂಟಿಂಗ್ ಮುಗೀತಲ್ಲ ಹೀಗಾಗಿ ಸ್ವಲ್ಪ ದಿನ ಹಾಯಾಗಿ ಕಾಲ ಕಳೆಯಲು ಅವರು ಫ್ಯಾಮಿಲಿ ಜೊತೆ ಮಾಲ್ಡೀವ್ಸ್ಗೆ ತೆರಳಿದ್ದಾರೆ ಎಂದು ಬಹುತೇಕರು ಅಂದುಕೊಂಡಿದ್ದಾರೆ.
ಆದರೆ ಯಶ್ ಪ್ರವಾಸಕ್ಕೆ ಕಾರಣ ಬೇರೆಯೇ ಇದೆ. ಪುಟ್ಟ ದ್ವೀಪ ದೇಶವಾಗಿರುವ ಮಾಲ್ಡೀವ್ಸ್ನ ಪ್ರಮುಖ ಆದಾಯ ಇಲ್ಲಿನ ಪ್ರವಾಸೋದ್ಯಮ. ಕೊರೋನಾ ಇಲ್ಲಿನ ಪ್ರವಾಸೋದ್ಯಮಕ್ಕೆ ಸಾಕಷ್ಟು ಪೆಟ್ಟು ನೀಡಿದೆ. ಇದರಿಂದ ದೇಶದ ಆದಾಯ ಕೂಡ ಕಡಿಮೆಯಾಗಿದೆ. ಇದೇ ಹಿನ್ನಲೆ ಇಲ್ಲಿನ ಪ್ರವಾಸೋದ್ಯಮ ಬಲಗೊಳಿಸಲು ಮುಂದಾಗಲಾಗಿದೆ. ಇಲ್ಲಿನ ಹಲವು ದ್ವೀಪಗಳಲ್ಲಿರುವ ಪುಟ್ಟ ಪುಟ್ಟ ದ್ವೀಪಗಳಲ್ಲಿನ ಐಷಾರಾಮಿ ರೆಸ್ಟೋರೆಂಟ್ಗಳು ಮೂರು- ನಾಲ್ಕು ದಿನಗಳ ಕಾಲ ಪ್ರಾಯೋಜಿತ ಟ್ರಿಪ್ ಆಯೋಜಿಸುತ್ತಿವೆ.
ಸ್ಟಾರ್ ನಟರು ಇಲ್ಲಿನ ಧರೆಗಿಳಿದ ಸ್ವರ್ಗದಂತಹ ನೀಲಿ ಕಡಲ ತೀರದ ಚಿತ್ರಣಗಳನ್ನು ಹಂಚಿಕೊಳ್ಳುವ ಮೂಲಕ ಅದರ ಪ್ರಚಾರ ಕಾರ್ಯ ನಡೆಸುತ್ತಾರೆ. ಆ ಚಿತ್ರಗಳೊಂದಿಗೆ ಅವರು ತೆರಳಿದ ದ್ವೀಪ ಹಾಗೂ ರೆಸಾರ್ಟ್ಗಳ ಹೆಸರಿನ ಸಮೇತ ರಾಧಿಕಾ- ಯಶ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಆ ರೆಸಾರ್ಟ್ಗಳ ಪ್ರಚಾರಕ್ಕೆ ಬಲ ತುಂಬುತ್ತಿದ್ದಾರೆ. ಇದರಿಂದ ಪ್ರವಾಸದ ಹವ್ಯಾಸ ಇರುವ ಅಭಿಮಾನಿಗಳು ಅಲ್ಲಿಗೆ ತೆರಳುವಂತೆ ಪ್ರೇರೇಪಿಸುವ ಕಾರ್ಯ ನಡೆಸುವುದು ಇದರ ಮುಖ್ಯ ಉದ್ದೇಶ. ಈ ಹಿಂದೆ ನಟ ಯಶ್-ರಾಧಿಕಾ ಯಾವುದೇ ಪ್ರವಾಸಿ ತಾಣಕ್ಕೆ ತೆರಳಿದರೂ ಅದರ ವಿವರಗಳನ್ನು ತಿಳಿಸುತ್ತಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಅವರು ಈ ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
PublicNext
22/01/2021 03:01 pm