ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎ.ಟಿ ರಘು ಅವರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ ನಟ ಸುದೀಪ್. ಎ.ಟಿ ರಘು ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಸುದೀಪ್ ''ಧೈರ್ಯವಾಗಿರಿ, ನಿಮ್ಮ ಜೊತೆ ನಾವು ಇದ್ದೇವೆ, ನಮ್ಮಿಂದ ಆಗುವ ಸಹಾಯ ನಾವು ಖಂಡಿತಾ ಮಾಡುತ್ತೇವೆ'' ಎಂದು ಭರವಸೆ ನೀಡಿದ್ದಾರೆ.
ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳುತ್ತಿರುವ ಎಟಿ ರಘು ಪ್ರಸ್ತುತ ಡಯಾಲಿಸೀಸ್ ಚಿಕಿತ್ಸೆಯಲ್ಲಿದ್ದಾರೆ. ಹೃದಯ, ಕಣ್ಣಿನ ಶಸ್ತ್ರ ಚಿಕಿತ್ಸೆಯೂ ಆಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ತಮ್ಮ ಅಸಹಾಯಕತೆ ನೆನೆದು ಎಟಿ ರಘು ಅವರು ನೋವು ಪಡುತ್ತಿದ್ದರು. ಅಂಬರೀಶ್ ಹೋದ್ಮೇಲೆ ನಮ್ಮ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ಬೇಸರಗೊಂಡಿದ್ದರು.ಅಂಬರೀಶ್ ಅವರು ಬದಕಿರುವವರೆಗೂ ಸಹಾಯ ಮಾಡ್ತಿದ್ರು. ಅಂಬರೀಶ್ ನಿಧನದ ನಂತ್ರ ಚಿತ್ರರಂಗದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಇದೀಗ, ಎಟಿ ರಘು ಅವರಿಗೆ ಫೋನ್ ಮಾಡಿ ಮಾತನಾಡಿದ ಸುದೀಪ್ ''ನಿಮ್ಮ ಜೊತೆ ನಾವು ಇದ್ದೇವೆ, ಧೈರ್ಯವಾಗಿರಿ, ನಾವು ಸಹಾಯ ಮಾಡುತ್ತೇವೆ'' ಎಂದು ಭರವಸೆ ನೀಡಿದ್ದಾರೆ.
PublicNext
11/01/2021 08:03 pm