ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ಹಿರಿಯ ನಟಿ ತನ್ಯಾ ನಿಧನ

ಅಮೆರಿಕದ ಖ್ಯಾತ ನಟಿ, ‘ಎ ವ್ಯೂ ಟು ಕಿಲ್​​​​’ ಸಿನಿಮಾ ಖ್ಯಾತಿಯ ತನ್ಯ ರಾಬರ್ಟ್​​ ಅಕಾಲಿಕ(65) ಮರಣ ಹೊಂದಿದ್ದಾರೆ. ‘ಧಟ್ಸ್​​​ 70 ಶೋ’ ಎಂಬ ಟಿವಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಕಂಡುಕೊಂಡಿದ್ದ ತನ್ಯ ರಾಬರ್ಟ್ ಮೂತ್ರಪಿಂಡದ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆಕೆಯ ಪ್ರತಿನಿಧಿ ಮೈಕ್​​ ಪಿಂಗಲ್​ ತಿಳಿಸಿದ್ದಾರೆ.

ಕಳೆದ ಕ್ರಿಸ್​​ಮಸ್​ ಹಬ್ಬದಂದು ತಮ್ಮ ನಾಯಿಯನ್ನು ವಾಕಿಂಗ್​​​ ಕರೆದೊಯ್ದಿದ್ದರು. ಆ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ವೆಂಟಿಲೇಟರ್​ ಅಳವಡಿಸಲಾಗಿತ್ತು. ಆದ್ರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ನಟಿ ಸಾವನ್ನಪ್ಪಿದ್ದಾರೆ.

ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಮಾಡೆಲಿಂಗ್​​​ ಮತ್ತು ಜಾಹೀರಾತುಗಳಲ್ಲಿ ನಟಿಸುತ್ತಿದ್ದ ರಾಬರ್ಟ್​​, ‘ಫೋರ್ಸ್ಡ್​​​ ಎಂಟ್ರಿ’ ಎಂಬ ಹಾರರ್​​ ಸಿನಿಮಾ ಮೂಲಕ 1975ರಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

06/01/2021 04:25 pm

Cinque Terre

48.82 K

Cinque Terre

2

ಸಂಬಂಧಿತ ಸುದ್ದಿ