'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಣ್ಣದ ರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಇಂದು ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿಯಲ್ಲಿ ಒಬ್ಬರಾಗಿದ್ದಾರೆ. 'ಬೆಳೆಗೆದ್ದು ಯಾರ ಮುಖವ ನಾನು ನೋಡಿದೆ' ಹಾಡು ಯೂಟ್ಯೂಬ್‌ನಲ್ಲಿ 10 ಕೋಟಿಗೂ ಹೆಚ್ಚು ವ್ಯೂವ್ಸ್ ಆಗಿರುವ ವಿಚಾರವನ್ನು ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಂದಣ್ಣ, ''ಬೆಳಗೆದ್ದು- ಇದು ನನ್ನ ಮೊಟ್ಟಮೊದಲ ಹಾಡು. ನಾನು ಸಂಪೂರ್ಣವಾಗಿ ಆರಾಧಿಸುವ ಹಾಡು 10 ಕೋಟಿ (100 ಮಿಲಿಯನ್) ವ್ಯೂವ್ಸ್ ಆಗಿದೆ. ಈ ಹಾಡನ್ನು ನನ್ನದಾಗಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆ ಮಾಂಟೇಜ್‌ಗಳ ಮೂಲಕ ಜೀವಿಸುತ್ತಿದ್ದೇನೆ ಮತ್ತು ನನ್ನಲ್ಲಿ ಸಾನ್ವಿಯನ್ನು ಕಂಡುಕೊಂಡಿದ್ದೇನೆ. ಆ ಪ್ರಯಾಣ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟ್ವೀಟ್ ಅನ್ನು ನಿರ್ದೇಶಕ, ನಟ ರಿಷಭ್ ಶೆಟ್ಟಿ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ನಟಿ ಸಂಯುಕ್ತ ಹೆಗ್ಡೆ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಕಿರಿಕ್ ಬೆಡಗಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ''ಇನ್ನೂ ಹೆಚ್ಚು ಹೆಚ್ಚು ಬೆಳೆಯಿರಿ. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ'' ಎಂದು ಶುಭಕೋರಿದ್ದಾರೆ.
ಸಿಂಪಲ್ ಸ್ಟಾರ್ ರೀ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲ ನೆಟ್ಟಿಗರು ರಶ್ಮಿಕಾ ಕಾಲು ಎಳೆಯುತ್ತಿದ್ದು, ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
PublicNext
26/12/2020 08:06 am