ಸದಾ ಹಸನ್ಮುಖಿ, ಸರಳ ಜೀವಿ ಎಸ್.ಬಿ.ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎಂಬ ಸುದ್ದಿ ಅವರ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ತಂದಿದೆ. ಭಾವುಕ ಜೀವಿಯನ್ನ ಕಳೆದುಕೊಂಡ ನಾವು, ನೀವು ಮೌನಕ್ಕೆ ಜಾರಿದ್ದೇವೆ. ಇಂತಹ ಮೇರು ವ್ಯಕ್ತಿಯನ್ನ ತನ್ನ ಮಡಿಲಿಗೆ ತೆಗೆದುಕೊಳ್ಳಲು ಚಿತೆಗೂ ಚಿಂತೆ ಶುರುವಾಗಿದೆ.
ಕನ್ನಡ, ತಮಿಳು, ಹಿಂದೆ ಸೇರಿದಂತೆ ವಿವಿಧ ಭಾಷೆಯ ಸಿನಿಮಾಗಳಿಗೆ ಹಿನ್ನೆಲೆ ಗಾಯನ ನೀಡಿದ್ದ ಎಸ್‌ಪಿಬಿ ಈಗ ನೆನಪು ಮಾತ್ರ. ಅವರ ಅಂತಿಮ ದರ್ಶನಕ್ಕಾಗಿ ಅನೇಕ ಅಭಿಮಾನಿಗಳು ಮುಂದಾಗಿದ್ದಾರೆ. ಕುಟುಂಬಸ್ಥರು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಹೀಗಿರುವಾಗ ಅವರನ್ನು ಹೇಗೆ ಬಹುಬೇಗ ನನ್ನ ಮಡಿಲಿಗೆ ಕರೆದುಕೊಳ್ಳಲಿ ಎಂದು ಚಿತೆಗೂ ಚಿಂತೆ ಕಾಡುತ್ತಿದೆ.
ಸಂಗೀತರಾಗನಾಗಬೇಕು, ಸಿನಿಮಾಕ್ಕಾಗಿ ಹಾಡಬೇಕು, ಆ ಮೂಲಕ ಅಪ್ಪ ಅಮ್ಮನಿಗೆ ಸಹಾಯ ಮಾಡಬೇಕು. ಜೊತೆಗೆ ನನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಎಸ್‌ಪಿಬಿ ಹಠ ಹಿಡಿದಿದ್ದರು. ಅದು ಅಷ್ಟು ಸುಲಭ ಆಗಿರಲಿಲ್ಲ ಅನ್ನೋದು ಕೆಲವೇ ತಿಂಗಳಲ್ಲಿ ಗೊತ್ತಾಯಿತು. ಆದರೂ ಹಿಡಿದ ಹಠವನ್ನು ಬಿಡಲಿಲ್ಲ. ಕಾಲೇಜುಗಳಲ್ಲಿ ಹಲವಾರು ಸಿಂಗಿಂಗ್ ಕಾಂಪಿಟೇಶನ್‍ಗಳಲ್ಲಿ ಹಾಡಿದರು. ಈ ವೇಳೆ ಖ್ಯಾತ ಗಾಯಕಿ ಜಾನಕಮ್ಮ ಎಸ್‌ಪಿಬಿ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟಿದ್ದರು. ಅಂದಿನಿಂದ ಮತ್ತಷ್ಟು ಉತ್ಸಾಹದೊಂದಿಗೆ ಸಂಗೀತ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಾಲು ಇಂದು ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
PublicNext
25/09/2020 06:25 pm