ಬೆಂಗಳೂರು : ಚಂದನವನದಲ್ಲಿ ಹೂಳೆಬ್ಬಿಸಿರುವ ಡ್ರಗ್ಸ್ ಪ್ರಕರಣಗಳ ಸುಳಿಯಲ್ಲಿ ಕನ್ನಡಿಗರಿಗೆ ಮಹತ್ವದ ಮಾಹಿತಿಯೊಂದು ಮರೆಯಾಗಿದೆ. ಒಬ್ಬ ಡೈರಕ್ಟರ್ ಕನ್ನಡವನ್ನ ಬೆಳೆಸಬೇಕಾದರೆ ಹಿಂದಿ ಹೇರಿಕೆಯನ್ನ ಧನಾತ್ಮಕವಾಗಿ ಸಾರ್ವಜನಿಕ ಬದುಕಿಗೆ ತೊಂದರೆ ಆಗದಂತೆ ವಿರೋಧಿಸುವ ನಿಯಮ ಸೆಪ್ಟೆಂಬರ್ 17 ರಂದೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ ವಿನಃ ಯಾವುದೇ ಮೀಡಿಯಾದಲ್ಲಿ ಕಾಣಿಸಲೇ ಇಲ್ಲಾ.
ಯಾವ ಡೈರೆಕ್ಟರ್ ? ಹೇಗೆ ಹಿಂದಿ ಹೇರಿಕೆ ತೆಗೆಯೋದು ಅಂದ್ರಾ ? ಲೂಸಿಯಾ, ಯೂ ಟರ್ನ್ ಸಿನಿಮಾ ಖ್ಯಾತಿಯ ಡೈರೆಕ್ಟರ್, ಪವನಕುಮಾರ್ ಯಾರಿಗೆ ಗೊತ್ತಿಲ್ಲಾ ಹೇಳಿ ಆದ್ರೆ ಅವರ ಚಿಂತನೆಯೊಂದು ಗೊತ್ತಾಗದೆ ಇರೋದೆ ವಿಪರ್ಯಾಸ. ಒಬ್ಬ ಸಿನಿಮಾ ಜಗತ್ತಿನವ ಸಿನಿಮಾದ ಮೂಲಕವೇ ಹಿಂದಿ ವಿರೋಧಿಸುವ ಮಾರ್ಗ ಹೇಳಿದ್ದು ಕನ್ನಡಿಗರ ಬೆಂಬಲ ಕೇಳಿದ್ದಾರೆ.
ನಾವು ನೀವು ಸೇರಿ ಹಿಂದಿ ಹೇರಿಕೆ ಬಗ್ಗೆ 10 ರಿಂದ 15 ನಿಮಿಷದ ಸಿನಿಮಾ ಮಾಡೋಣ ಆ ಸಿನಿಮಾಗೆ ಸೆನ್ಸಾರ್ ಬೋರ್ಡ್ ಇಂಗ್ಲಿಷ್ ಇಲ್ಲವೇ ಹಿಂದಿ ಸರ್ಟಿಫಿಕೇಟ್ ಕೊಡುತ್ತೆ ಅದನ್ನು ವಿರೋಧಿಸಿ ಕನ್ನಡದಲ್ಲಿ ಕೆಳೋಣ ಅವ್ರು ಕೊಡೊಲ್ಲ.
ಬದಲಾಗಿ ಚಿತ್ರಮಂದಿರದಲ್ಲಿ ಚಿತ್ರ ರಿಲೀಜ್ ಮಾಡೋಣ ಒಪ್ಪದಿದ್ರೇ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ವೈರಲ್ ಮಾಡೋಣ ಈ ಕೆಲ್ಸ ನನ್ನೊಬ್ಬನಿಂದಲೇ ಸಾಧ್ಯವಿಲ್ಲ ಅದಕ್ಕೆ ಕನ್ನಡಿಗರ ಸಹಕಾರ ಬೇಕು ಕಾರಣ ನಾನೋಬ್ಬನೆ ಹಿಂದಿ ಇಂಗ್ಲಿಷ್ ಸೆನ್ಸಾರ್ ಸರ್ಟಿಫಿಕೇಟ್ ವಿರೋಧ ಮಾಡಿದ್ರೆ ( ಇಂಡಿಯನ್ ಸಿನಿಮಾಟೋ ಗ್ರೂಪ್ ರೂಲ್ಸ್ ಬ್ರೇಕ್ ) ಮಾಡಿದ ಅಪರಾಧ ಮೇಲೆ ಕೇಸ್ ಆಗುತ್ತೆ 3 ವರ್ಷ ಜೈಲು ವಾಸ ಬದಲಾಗಿ 50 ಜನ ಸೇರಿ ಮಾಡಿದ್ರೆ ಸಂಘಟನೆಗೆ ಬಲ ಬರುತ್ತೆ ಹಿಂದಿ ಹೇರಿಕೆ ಫಿಲ್ಮ್ ನಾನು ಪ್ರೀ ಡೈರೆಕ್ಟ್ ಮಾಡುತ್ತೆನೆ.
ನನ್ನಂಥ ಇತರ ಕಲಾವಿದರು ಟೆಕ್ನಿಷಿಯನ್ ಪ್ರೀ ಯಾಗಿ ಕೆಲ್ಸಾ ಮಾಡಬಹುದು ಬನ್ನಿ ಹಿಂದಿ ಹೇರಿಕೆಗೆ ಹೋರಾಡೋಣ ಎನ್ನುವ ಭರವಸೆಗೆ ಕಾಮೆಂಟ್ ಗಳ ಸುರಿಮಳೆ ಬಂದಿದೆ ನಿಮ್ಮದು ಅದೆಷ್ಟರ್ ಮಟ್ಟಿಗೆ ಪ್ರೋತ್ಸಾಹವಿದೆ ಎಂಬುದನ್ನು ಈ ವಿಡಿಯೋ ನೋಡಿ ಕೆಳಗಿರುವ ಲಿಂಕ್ ಜೊತೆ ಪವನ್ ಕುಮಾರ್ ಫೇಸ್ಬುಕ್ ಖಾತೆ ಸಂಪರ್ಕಿಸಿ.
PublicNext
23/09/2020 08:03 pm