ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಕೈಬಿಡುವಂತೆ ವಿವಿಧ ರೈತ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿಸಿವೆ. ಇದಕ್ಕೆ ಹೋರಾಟಕ್ಕೆ ಅಮೆರಿಕದ ಖ್ಯಾತ ಪಾಪ್ ಸ್ಟಾರ್ ರಿಹಾನ್ನ ಬೆಂಬಲ ಸೂಚಿಸಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮವೊಂದು ರೈತರ ಪ್ರತಿಭಟನೆಯ ಕುರಿತು ವರದಿ ಮಾಡಿರುವುದನ್ನ ಉಲ್ಲೇಖಿಸಿ ಟ್ವೀಟ್ ಮಾಡಿರುವ ರಿಹಾನ್ನ, ''ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ'' ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ, ''ತಮ್ಮ ದೇಶವು ಶಾಂತಿಯುತ ಪ್ರತಿಭಟನೆಗಳ ಪರವಾಗಿ ಸದಾ ಇರುತ್ತದೆ'' ಎಂದಿದ್ದರು. ಈ ಮೂಲಕ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅಂತಾರಾಷ್ಟ್ರೀಯ ಮಟ್ಟದ ಮೊದಲ ನಾಯಕರಾಗಿದ್ದರು. ಆದರೆ ಜಸ್ಟಿನ್ ಅವರ ಹೇಳಿಕೆಗೆ ಕೇಂದ್ರ ಸಚಿವರು, ಬಿಜೆಪಿ ನಾಯಕರು ಕಟುವಾದ ಪ್ರತಿಕ್ರಿಯೆ ನೀಡಿದ್ದರು. ಇದು ಪ್ರಜಾಸತ್ತಾತ್ಮಕ ದೇಶವೊಂದರ ಆಂತರಿಕ ವಿಚಾರ. ಈ ಬಗ್ಗೆ ಜಸ್ಟಿನ್ ಅವರು ಮಾತನಾಡುವ ಅಗತ್ಯ ಇರಲಿಲ್ಲ ಮತ್ತು ಅವರಿಗೆ ಈ ವಿಚಾರದಲ್ಲಿ ಪೂರ್ಣ ಮಾಹಿತಿಯೂ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲ ಹೇಳಿತ್ತು.
PublicNext
03/02/2021 07:51 am