ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅಪ್ಪು ಅಮರ,ನೆನಪು ಅಜರಾಮರ

ಗದಗ: ಅಪ್ಪು ಅಗಲಿ ಸರಿಸುಮಾರು ಮೂರು ತಿಂಗಳು ಆಗ್ತಾ ಬಂದರು ಅವರ ಸಾವಿನ ನೋವಿನಿಂದ ಅಭಿಮಾನಿಯೊಬ್ಬ ಇನ್ನೂ ಹೊರಬಂದಿಲ್ಲ. ಅಪ್ಪು ದೇವರೆಂದು ತನ್ನ ಮನೆ ಜಗಲಿ ಮೇಲೆ ಫೋಟೋ ಇಟ್ಟು ನಿತ್ಯ ಪೂಜೆ ಮಾಡುವುದರ ಮೂಲಕ ತನ್ನ ಉಸಿರು ಇರುವವರೆಗೂ ಅಪ್ಪು ಹೆಸರು ಅಜರಾಮರವಾಗಿರಲೆಂದು ಈ ರೀತಿ ಅಭಿಮಾನ ಪ್ರದರ್ಶಿಸುತ್ತಿದ್ದಾನೆ.

ಮೈ, ಕೈ, ಎದೆ ಭಾಗದಲ್ಲೆಲ್ಲಾ ಅಚ್ಚಳಿಯದಂತೆ ಅಚ್ಚೆ ಹಾಕಿಸಿಕೊಂಡಿರೋ ಈತ ಮನೆ, ಮನ ತುಂಬೆಲ್ಲಾ ಅಪ್ಪುವಿನ ಅಭಿಮಾನವೆಂಬಂತೆ ಎಲ್ಲಿ ನೋಡಿದರಲ್ಲಿ ಮರೆಯಾದ ಮಾಣಿಕ್ಯನ ಭಾವಚಿತ್ರಗಳು ರಾರಾಜಿಸುತ್ತಿದೆ.ಹೌದು ತಾಲೂಕಿನ ಸಂಭಾಪುರ ಗ್ರಾಮದ ಅಭಿಮಾನಿ ಮುತ್ತಪ್ಪ ಅಲಿಯಾಸ್ ಅಪ್ಪು ಹೊನರೆಡ್ಡಿ ಮಕರ ಸಂಕ್ರಾಂತಿಯಂದು ಅಪ್ಪುವಿನ ಅದ್ಭುತ ಆರಾಧನೆ ಮಾಡಿದ್ದಾನೆ.

ಅಪ್ಪು ನಿಧನದ ಸುದ್ದಿ ತಿಳಿದು ತನ್ನ ಹಮಾಲಿ ಕೆಲಸ ಬಿಟ್ಟು ಬೆಂಗಳೂರಿಗೆ ತೆರಳಿ, ಮೂರು ದಿನ ಸಮಾಧಿ ಬಳಿ ಸೇವೆ ಮಾಡಿ ಅಭಿಮಾನ ವ್ಯಕ್ತಪಡಿಸಿದ್ದ. ಕುಟುಂಬಸ್ಥರು ಯಾವ ರೀತಿ ತಿಥಿಕಾರ್ಯ ಮಾಡುತ್ತಾರೋ ತಾನೂ ಸಹ ಕಾರ್ಯ ಮಾಡಿದ್ದ ಎದೆಮೇಲೆ ಅಪ್ಪುಭಾವಚಿತ್ರದ ಅಚ್ಚೆ, ಕೈನಲ್ಲಿ ಹಾಗೂ ಬೆನ್ನಲ್ಲಿ ಅಪ್ಪುವಿನ 30 ಹೆಸರುಗಳ ಅಚ್ಚೆ ಹಾಕಿಸಿ ಹಮಾಲಿ ಹಾಗೂ ಕೃಷಿ ಕಾಯಕ ಮಾಡುತ್ತಾನೆ ಈ ಜೂನಿಯರ್ ಅಪ್ಪು.

ಇಬ್ಬರು ಗಂಡು ಮಕ್ಕಳಿಗೆ ಅಪ್ಪು ಹೆಸರಿಟ್ಟಿದ್ದಾನೆ, ಹಿರಿಯ ಮಗನಿಗೆ ಅಪ್ಪು, ೨ ನೆ ಮಗನಿಗೆ ಅಭಿ ಅಂತ ನಾಮಕರಣ ಮಾಡಿರುವ ಈತ ಮನೆ ತುಂಬೆಲ್ಲ ಗೋಡೆ ಮೇಲೆ ಅಪ್ಪುವಿನ ಆರಾಧನೆ ಮಾಡುತ್ತಿದ್ದಾನೆ. ಸಂಕ್ರಮಣದಂದು ಪ್ರತಿವರ್ಷ ಮನೆದೇವರಿಗೆ ಪೂಜೆಗೆ ಹೋಗ್ತಿದ್ದ ಕುಟುಂಬಸ್ಥರು ಈ ವರ್ಷ ಮನೆಯಲ್ಲೇ ಪರಮಾತ್ಮನಿಗೆ ವಿಶೇಷವಾದ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಒಟ್ಟಿನಲ್ಲಿ ಪಾರವೇ ಇಲ್ಲದಂತಾಗಿದೆ ಸಂಭಾಪುರದ ಮುತ್ತಪ್ಪನ ಪ್ರೀತಿ, ವಾತ್ಸಲ್ಯಕ್ಕೆ.

Edited By : Manjunath H D
PublicNext

PublicNext

15/01/2022 12:49 pm

Cinque Terre

61.22 K

Cinque Terre

0