ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಲಾಕ್ ಕೋಬ್ರಾ ಬರದಿದ್ರೆ ನಾನು ಮದುವೆಯಾಗಲ್ಲ : ಹಠ ಹಿಡಿದ ಮದುಮಗಳು!

ದಾವಣಗೆರೆ: ಬಹಳಷ್ಟು ಜನಕ್ಕೆ ತಮ್ಮ ನೆಚ್ಚಿನ ನಾಯಕ, ನಾಯಕಿಯರನ್ನು ಭೇಟಿಯಾಗಬೇಕು ಎನ್ನುವ ಮಹದಾಸೆ ಇರುತ್ತದೆ. ಹಾಗಾಗಿ ಅನೇಕರು ಅವರನ್ನು ಭೇಟಿಯಾಗಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಸದ್ಯ ಇಲ್ಲೊಬ್ಬ ಮದುಮಗಳು ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡದಿದ್ದರೆ ನಾನು ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಹಠ ಹಿಡಿದಿರುವ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.

ನಗರದ ರಾಮನಗರದ ಯುವತಿ ಎಸ್.ಅನುಷಾಳ ಮದುವೆ ಪ್ರಕಾಶ್ ಎಂಬಾತನ ಜತೆ ನ.29ರಂದು ನಿಶ್ಚಯವಾಗಿದೆ. ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದೆ. ಈ ಆಹ್ವಾನ ಪತ್ರಿಕೆಯಲ್ಲಿ ವಿಶೇಷ ಆಹ್ವಾನಿತರು ಎಂದು ದುನಿಯಾ ವಿಜಯ್ ಭಾವಚಿತ್ರದ ಜತೆಗೆ ಸಲಗ ಟೀಂ ಎಂದೂ ಮುದ್ರಿಸಲಾಗಿದೆ. ಜತೆಗೆ ಮದುಮಗಳ ಫೋಟೋ ಕೂಡ ಇದೆ.

5 ವರ್ಷದ ಹಿಂದೆ ಅನುಷಾ ತಂದೆ ಶಿವಾನಂದ್ ಅವರು ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದರು. ದುನಿಯಾ ವಿಜಯ್ ಅವರೇ ಬಂದು ಉದ್ಘಾಟಿಸಬೇಕು. ಅಲ್ಲಿಯವರೆಗೂ ಆ ಮನೆಯಲ್ಲಿ ವಾಸ ಮಾಡಲ್ಲ ಎಂದು ಸಂಕಲ್ಪ ಮಾಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ದುನಿಯಾ ವಿಜಯ್ ಆಗಮಿಸಿ ಅಭಿಮಾನಿಯ ಗೃಹ ಪ್ರವೇಶ ಮಾಡಿದ್ದರು.

Edited By : Nirmala Aralikatti
PublicNext

PublicNext

23/11/2021 06:46 pm

Cinque Terre

73.76 K

Cinque Terre

5

ಸಂಬಂಧಿತ ಸುದ್ದಿ