ವರದಿ: ರಹೀಂ ಉಜಿರೆ
ಮಲ್ಪೆ: ಟೂರ್ ಮಾಡೋದು ಅಂದ್ರೆ ಅಪ್ಪುಗೆ ತುಂಬಾ ಇಷ್ಟ. ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಅಂತೂ ಅಪ್ಪುಗೆ ತುಂಬಾನೇ ಫೇವರಿಟ್. ಇವತ್ತು ಮಲ್ಪೆ ಬೀಚ್ ನಲ್ಲಿ ಎಲ್ಲರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರನ್ನು ವಿಭಿನ್ನ ಕಲಾಕೃತಿಯೊಂದರ ಮೂಲಕ ಸ್ಮರಿಸಲಾಯಿತು. ಸ್ಥಳದಲ್ಲೇ ಕಲಾವಿದ ರಚಿಸಿದ ವಿಶೇಷ ಚಿತ್ರವನ್ನು ಕಂಡು ಜನ ವಿಸ್ಮಯ ಪಟ್ಟರು.
ಮಲ್ಪೆಯ ಕಲಾವಿದ ಮಹೇಶ್ ಅಪ್ಪು ಅಭಿಮಾನಿ. ಅಪ್ಪುಗೆ ಯಾವ ರೀತಿ ಶ್ರದ್ಧಾಂಜಲಿ ಸಲ್ಲಿಸುವುದು ಎಂದು ಯೋಚಿಸಿದಾಗ ಇವರಿಗೆ ಬಂದ ಕಲ್ಪನೆ... ಮಲ್ಪೆ ಬೀಚ್ ನಲ್ಲಿ ರೂಬಿಕ್ಸ್ ಕ್ಯೂಬ್ ಮೂಲಕ ಅಪ್ಪು ಭಾವಚಿತ್ರ ಬಿಡಿಸುವುದು. ಇಂದು ಬೆಳಿಗ್ಗೆ ಮಲ್ಪೆ ಕಡಲ ಕಿನಾರೆಗೆ ಬಂದ ಪ್ರವಾಸಿಗರಿಗೆ ಆಶ್ಚರ್ಯ ಕಾದಿತ್ತು. ನೋಡ ನೋಡುತ್ತಲೇ ಮಹೇಶ್ , 704 ರೂಬಿಕ್ಸ್ ಕ್ಯೂಬ್ ಗಳನ್ನು ತಮ್ಮ ಚಾಕಚಕ್ಯತೆಯಿಂದ ಜೋಡಿಸಿ ಅಪ್ಪು ಭಾವಚಿತ್ರ ರಚಿಸಿಯೇ ಬಿಟ್ಟರು!
"ಹೆಚ್ಚಿನವರಿಗೆ ಈ ರೂಬಿಕ್ಸ್ ಕ್ಯೂಬ್ ಆರ್ಟ್ ಬಗ್ಗೆ ಗೊತ್ತಿಲ್ಲ. ಇತ್ತೀಚೆಗಷ್ಟೆ ಇದು ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಭಾರತದ ಕೆಲವೇ ಕೆಲವು ರೂಬಿಕ್ಸ್ ಕ್ಯೂಬ್ ಕಲಾವಿದರಲ್ಲಿ ಇವರೂ ಒಬ್ಬರು.ನೆಸ್ಟ್ ಕಂಪನಿ ಇತ್ತೀಚೆಗೆ ಆಯೋಜಿಸಿದ್ದ ಮಂಚ್ ಸ್ಟಾರ್ ರಾಷ್ಟ್ರಮಟ್ಟದ ಪ್ರತಿಭಾ ಪ್ರದರ್ಶನದಲ್ಲಿ ಪ್ರಥಮ ಬಹುಮಾನದೊಂದಿಗೆ 5 ಲಕ್ಷ ನಗದು ಪುರಸ್ಕಾರ ಗೆದ್ದ ಹೆಗ್ಗಳಿಕೆ ಇವರದ್ದು"
"ಪ್ರಸ್ತುತ ಮಹೇಶ್ ಮಣಿಪಾಲದ ಮಾಹೆ ಉದ್ಯೋಗಿ. ಗಾಂಧಿ ಜಯಂತಿಯಂದು ಗಾಂಧೀಜಿ ಭಾವಚಿತ್ರ, ಮತ್ತೊಂದು ಸಂದರ್ಭ
ಸಾಲುಮರದ ತಿಮ್ಮಕ್ಕ ಭಾವಚಿತ್ರ ಹೀಗೆ ಹಲವು ಮಹನೀಯರ ಚಿತ್ರವನ್ನು ರೂಬಿಕ್ ಕ್ಯೂಬ್ ಮೂಲಕ ಅನಾವರಣಗೊಳಿಸಿ ಪ್ರತಿಭೆ ಮೆರೆದಿದ್ದಾರೆ"
PublicNext
09/11/2021 06:38 pm