ಲಖನೌ: ವಿಶೇಷ ದಿನಕ್ಕೆ ವಿಶೇಷ ಕೊಡುಗೆ ನೀಡಲು ಸಿನಿಮಾ ಮಂದಿರ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಆಫರ್ ನೀಡಲಾಗುತ್ತಿದೆ. ಹೌದು ಉತ್ತರ ಪ್ರದೇಶದ ಲಖನೌ ಜಿಲ್ಲಾಡಳಿತ ಜಿಲ್ಲೆಯ ಜನರಿಗೆ ಸ್ಪೆಷಲ್ ಕೊಡುಗೆ ಕೊಡುತ್ತಿದೆ. ಎಲ್ಲ ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ಟಿಕೆಟ್ ದರವನ್ನು ಒಂದು ದಿನದ ಮಟ್ಟಿಗೆ 10 ರೂಪಾಯಿಗೆ ಇಳಿಸಲಾಗಿದೆ.
ಜನವರಿ 26ರಂದು ಜಿಲ್ಲೆಯ ಎಲ್ಲ ಸಿನಿಮಾ ಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ದೇಶಭಕ್ತಿಯ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಈ ಎಲ್ಲ ಸಿನಿಮಾಗಳ ಟಿಕೆಟ್ ದರವನ್ನು 10 ರೂಪಾಯಿಗೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ಪ್ರಕಟಣೆ ಹೊರಡಿಸಿದ್ದಾರೆ.
ಕೇವಲ 10 ರೂಪಾಯಿ ತೆಗೆದುಕೊಂಡು ಹೋಗಿ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡಿಕೊಂಡು ಬನ್ನಿ.ರಾಜಿ, ಉರಿ- ದಿ ಸರ್ಜಿಲ್ ಸ್ಟ್ರೈಕ್, ಮಿಷನ್ ಮಂಗಲ್ ನಂತಹ ದೇಶಭಕ್ತಿ ಸಿನಿಮಾಗಳನ್ನು ಪ್ರದರ್ಶನ ಮಾಡುವುದಾಗಿ ತಿಳಿಸಲಾಗಿದೆ.
PublicNext
25/01/2021 07:41 pm