ತಮ್ಮ ಹಾಡುಗಳಿಂದಲೇ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಗಳಿಸಿರುವ ಬಾಲಿವುಡ್ನ ಟಾಪ್ ಗಾಯಕಿಯರಲ್ಲಿ ಒಬ್ಬರಾದ ನೇಹಾ ಕಕ್ಕರ್ ಅವರು ಸದ್ಯದಲ್ಲೇ ವನದಾಂಪತ್ಯಕ್ಕೆ ಕಾಲಿಡಲಿದ್ದಾರೆ.
ಸದ್ಯದಕ್ಕೇ ವಿವಾಹವಾಗಲಿದ್ದಾರೆ, ಈ ಹಿಂದೆಯೂ ನೇಹಾ ಅವರ ಹೆಸರು ಗಾಯಕ ಉದಿತ್ ನಾರಾಯಣ್ ಅವರ ಮಗನೊಂದಿಗೆ ತಳುಕು ಹಾಕಿಕೊಂಡಿತ್ತು.
ಸದ್ಯ ನೇಹಾರ ವಿವಾಹದ ಸುದ್ದಿ ಎಲ್ಲೆಡೆ ಗುಲ್ಲಾಗುತ್ತಿದೆ. ಸದ್ಯದಲ್ಲೇ ಪಂಜಾಬಿ ಗಾಯಕನ ಜೊತೆ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಂಜಾಬಿ ಗಾಯಕ ರೋಹನ್ ಪ್ರೀತ್ ಸಿಂಗ್ ಅವರೊಂದಿಗೆ ನೇಹಾ ಮದುವೆಯಾಗಲಿದ್ದಾರಂತೆ. ಈ ಹಿಂದೆ ಈ ಜೋಡಿಯ ವಿಡಿಯೋ ಸಹ ಸಖತ್ ವೈರಲ್ ಆಗಿತ್ತು.
ಈ ಕೆಲವು ದಿನಗಳ ಹಿಂದೆ ನೇಹಾ ನೇಹಾ ಹಾಗೂ ಆದಿತ್ಯ ನಾರಾಯಣ ವಿವಾಹವಾಗಲಿದ್ದಾರೆ ಎಂದೂ ಹೇಳಲಾಗುತ್ತಿತ್ತು, ಅವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ, ಆದರೆ ಅದು ಕೇವಲ ಚಾನಲ್ವೊಂದರ ಕಾರ್ಯಕ್ರಮಕ್ಕಾಗಿ ಈ ಸುದ್ದಿ ಹಬ್ಬಿಸಲಾಗಿತ್ತಂತೆ.
PublicNext
06/10/2020 12:04 pm