ಲಂಡನ್: ಕೊರೊನಾ ರೂಪಾಂತರ ಹರಡುವುದನ್ನು ತಡೆಯಲು ಬ್ರಿಟನ್‌ನಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಾಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಲಂಡನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಿಯಾಂಕಾ ಅವರು ಲಂಡನ್‌ನಲ್ಲಿ ಹಾಲಿವುಡ್ ಚಿತ್ರ 'ಟೆಕ್ಸ್ಟ್ ಫಾರ್ ಯು' ಚಿತ್ರೀಕರಣದಲ್ಲಿದ್ದರು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರು ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಅವರು ಅಮೆರಿಕಕ್ಕೆ ಹಿಂತಿರುಗಲು ವಿಶೇಷ ಅನುಮತಿಯನ್ನು ಕೋರಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
PublicNext
24/12/2020 01:55 pm