ಮದುವೆಯಾಗಿ ನಾನು ತಪ್ಪು ಮಾಡಿದೆ. ಆ ವ್ಯಕ್ತಿಯನ್ನು ನಾನು ಮದುವೆ ಆಗಬಾರದಿತ್ತು ಎಂದು ನಟಿ ರಾಖಿ ಸಾವಂತ್ ಹೇಳಿದ್ದಾರೆ.
ಬಿಗ್ಬಾಸ್ 14ನೇ ಸೀಸನ್ ಗೆ 'ಚಾಲೆಂಜರ್' ಆಗಿ ತೆರಳುವ ಮುನ್ನ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ರಾಖಿ, ಶ್ರೀಮಂತ ವ್ಯಕ್ತಿಯನ್ನು ಮದುವೆಯಾದರೆ ನನ್ನ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ಕಾರಣಕ್ಕೆ ಶ್ರೀಮಂತ ವ್ಯಕ್ತಿಯನ್ನು ಮದುವೆಯಾದೆ, ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ.
ನನ್ನ ಕುಟುಂಬದ ಜವಾಬ್ದಾರಿಯನ್ನು ನಾನೇ ಹೊರುತ್ತಿದ್ದೇನೆ. ನನ್ನ ಬಳಿ ಇರುವ ಹಣವೆಲ್ಲಾ ಖಾಲಿ ಆಗಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಮದುವೆ ನನ್ನ ಜೀವನದ ಅತಿದೊಡ್ಡ ತಪ್ಪು. ಜೊತೆಗೆ ನಾನು ಶಿಕ್ಷಣ ಪಡೆಯದಿರುವುದು ಸಹ ನನ್ನ ಪ್ರತಿಭೆ ಮೇಲೆ ನನಗೆ ನಂಬಿಕೆ ಇತ್ತು, ಈಗಲೂ ಇದೆ.
ನನ್ನ ಪ್ರತಿಭೆಯನ್ನೇ ನಂಬಿಕೊಂಡು ನಾನು ಜೀವನ ಸಾಗಿಸುತ್ತಿದ್ದೇನೆ.
ನನ್ನ ಗಂಡನ ಬಗ್ಗೆ ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಆತನಿಗೆ ಸಮಾಜದ ಎದುರು ಬರಲು ಇಷ್ಟವಿಲ್ಲ.
ಆತ ಬ್ರಿಟನ್ನಲ್ಲಿದ್ದಾನೆ. ಭಾರತಕ್ಕೆ ಬಂದು ಒಂದು ವರ್ಷವಾಯಿತು. ನಾನೂ ಆತನನ್ನು ನೋಡಿ ಒಂದು ವರ್ಷವಾಯಿತು ಎಂದಿದ್ದಾರೆ.
PublicNext
13/12/2020 03:01 pm