ರಿಯಲ್ ಸ್ಟಾರ್ ಉಪೇಂದ್ರ ಅವರ ಸಾಹೋದರನ ಪುತ್ರ ನಿರಂಜನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಚೊಚ್ಚಲ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಹೆಸರಿಡಲಾಗಿದೆ.
ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪೇಂದ್ರ ಅವರು ನಿರಂಜನ್ ಅವರ ಹಾರ್ಡ್‌ವರ್ಕ್ ಬಗ್ಗೆ ಮಾತನಾಡಿದರು. ಈ ವೇಳೆ ನಿರಂಜನ್‌ಗೆ ನೀವು ಯಾವ ಸಲಹೆ ಕೊಡ್ತೀರಾ ಎಂದು ಕೇಳಿದ್ದಕ್ಕೆ ಉಪೇಂದ್ರ ''ಸೀನಿಯರ್ಸ್ ಸಲಹೆ ಕೊಡೋದು ಮೊದಲು ಬಿಡಬೇಕು'' ಎಂದಿದ್ದಾರೆ.
''ಅವರಿಂದ ನಾವು ಕಲಿಯಬೇಕಿದೆ. ಯುವಕರು, ಹೊಸ ರೀತಿಯ ಆಲೋಚನೆ ಮಾಡ್ತಾರೆ, ನಮ್ಮ ಅನುಭವ ಮಾತ್ರ ಹೇಳ್ಬಹುದು ಅಷ್ಟೇ. ಅವರು ನಮಗಿಂತಲೂ ಹೆಚ್ಚು ತಿಳಿದುಕೊಂಡಿದ್ದಾರೆ. ಹೊಸದಾಗಿ ಏನೋ ಮಾಡಬೇಕು ಎಂಬ ಹಾದಿಯಲ್ಲಿದ್ದಾರೆ'' ಎಂದು ಉಪೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
PublicNext
06/12/2020 02:57 pm