ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ತಮ್ಮ 40 ವರ್ಷದ ಸಿನಿಮಾ ಜರ್ನಿಯನ್ನು ನೆನೆದು ಕಣ್ಣೀರಾಗಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಎರಡು ಚಿತ್ರಗಳು ನನ್ನ ಬದುಕಿಗೆ ದೊಡ್ಡ ಓಪನಿಂಗ್ ಕೊಟ್ಟವು. ಅದರಲ್ಲಿ ಶಿವಣ್ಣ ಅಭಿನಯದ ‘ರಣರಂಗ’ ಸಿನಿಮಾ ಕೂಡ ಒಂದು. ಬೇರೆಯವರಿಗೆ ನೀಡಿದ್ದ ಪಾತ್ರವನ್ನು ಬದಲಿಸಿ ನನಗೆ ಕೊಡಿಸಿದರು'' ಎಂದು ನೆನೆದರು.
‘ರೌಡಿ ಎಂಎಲ್‍ಎ’ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಿ ಅಂಬರೀಶ್ ಲೇ ಕರಿಯಾ ಹೀರೋ ಆಗು ಅಂದಿದ್ದರು. ನಾನು ನಾಯಕ ಆದೆ. ಆ ಸಿನಿಮಾದಲ್ಲಿ ಅಂಬರೀಶ್‌ಗೆ ಗೆಸ್ಟ್ ರೋಲ್ ಮಾಡಿಸಿದ್ದೆ. ಜೊತೆಗೆ ಆ ಸಿನಿಮಾವನ್ನು ನಾನೇ ನಿರ್ಮಿಸಿದ್ದೆ. ಹೀಗಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಮಗನ ಸ್ಕೂಲ್ ಫೀಸ್ ಕಟ್ಟೋಕೆ ಆಗಿರಲಿಲ್ಲ. ಮಧ್ಯರಾತ್ರಿ 2 ಗಂಟೆಗೆ ಅಂಬರೀಶ್ ಅವರ ಮನೆಗೆ ಹೋಗಿದ್ದೆ ಸರಿಯಾಗಿ ಬೈದು ಕಳಿಸಿದರು. ನಂತರ ಮಾಣಿಕ್ ಚಂದ್ ಎಂಬವರು ಕರೆ ಮಾಡಿ ಅಂಬರೀಶ್ ಹೇಳಿದರು ನೀವು ಸಿನಿಮಾ ಮಾಡಿದಿರಂತೆ ಎಂದು ಕೇಳಿದರು. ಅವರೇ ಕೈಯಿಂದ 5 ಲಕ್ಷ ಹಾಕಿ ಸಿನಿಮಾ ರಿಲೀಸ್ ಮಾಡಿದರು. ಆ ಸಿನಿಮಾ ಇತಿಹಾಸ ಬರೆಯಿತು. ಅಂದಿನ ಕಾಲದಲ್ಲೇ 1 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಸ್ಮರಿಸಿದರು.
PublicNext
24/11/2020 03:15 pm