ಬೆಂಗಳೂರು : ಹೊಟ್ಟೆ ನೋವಿನಿಂದ ಬಳಲಿ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಟಲ್‌ವುಡ್ ನಟ ಶರಣ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿನ್ನೆ ಶೂಟಿಂಗ್ಗೆ ತೆರಳಿದ್ದಾಗ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆರಂಭದಲ್ಲಿ ನಾನು ಮಸಲ್ ಕ್ಯಾಚಸ್ ಇರಬೇಕು ಎಂದು ಭಾವಿಸಿದ್ದೆ. ಆದರೆ ನಿನ್ನೆ ಸ್ಕ್ಯಾನ್ ಮಾಡಿದ ಬಳಿಕ ಕಿಡ್ನಿ ಸ್ಟೋನ್ ಇರುವುದು ತಿಳಿಯಿತು. ಸಣ್ಣ ಪ್ರಮಾಣದ ಸ್ಟೋನ್ ಇದೆ. ಏನೂ ತೊಂದರೆ ಇಲ್ಲ, ನೋವು ಕಡಿಮೆಯಾಗದಿದ್ದರೆ ಸರ್ಜರಿ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.
ನಾನು ಆಸ್ಪತ್ರೆಯಲ್ಲಿದ್ದರೂ, ಮನಸ್ಸಿರೋದು ಸಿನಿಮಾ ಕಡೆಯೇ. ನಿನ್ನೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ. ಹಿಂದಿನ ಎರಡು ದಿನ ನೋವು ಕಾಣಿಸಿಕೊಂಡಿದೆ. ಆದರೆ ಅದು ನನಗೆ ಗೊತ್ತಾಗಿರಲಿಲ್ಲ. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ. ಆದರೆ ನಿನ್ನೆ ಕಾಣಿಸಿಕೊಂಡ ನೋವು ತೀವ್ರವಾಗಿತ್ತು. ಅವತಾರ ಪುರುಷ ಟೀಂನವರೇ ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಪರೀಕ್ಷೆ ನಡೆಸಿ ಕಿಡ್ನಿ ಸ್ಟೋನ್ ಆಗಿದೆ. ಸದ್ಯಕ್ಕೆ ಏನು ತೊಂದರೆ ಇಲ್ಲ. ಎರಡು ದಿನ ರೆಸ್ಟ್ ಮಾಡೋಕೆ ಹೇಳಿದ್ದಾರೆ ಎಂದು ತಿಳಿಸಿದರು.
PublicNext
27/09/2020 05:29 pm