ಬೆಂಗಳೂರು: ಟಾಲಿವುಡ್ ನ ನಟಿ ಹಾಗೂ ಶಾಸಕಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದ ದುರಂತ ಸ್ವಲ್ಪದರಲ್ಲಿ ತಪ್ಪಿದೆ. ತಾಂತ್ರಿಕ ದೋಷದಿಂದ ದುರಂತ ಸಂಭವಿಸಿದ್ದರೇ, ಸರಿ ಸುಮಾರು ರೋಜಾ ಸೇರಿ 70 ಜನ ದುರ್ಮರಣ ಹೊಂದುತ್ತಿದ್ದರು. ಆದರೆ ಅದೃಷ್ಠ ಚೆನ್ನಾಗಿದೆ. ಎಲ್ಲರೂ ಬಚಾವ್ ಆಗಿದ್ದಾರೆ.
ರಾಜಮಂಡ್ರಿಯಿಂದ ತಿರುಪತಿಗೆ ವಿಮಾನದಲ್ಲಿಯೇ ನಟಿ ರೋಜಾ ಪ್ರಯಾಣ ಬೆಳೆಸಿದ್ದರು.ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದಲೇ ಕೆಲ ಹೊತ್ತು ಆತಂಕದ ವಾತಾವರಣವೂ ನಿರ್ಮಾಣವಾಗಿತ್ತು.ಈ ಕಾರಣಕ್ಕೇನೆ ಬೆಂಗಳೂರು ಕೆಂಪೇಗೌಡ ನಿಲ್ದಾಣದಲ್ಲಿಯೇ ವಿಮಾನವನ್ನ ಲ್ಯಾಂಡ್ ಮಾಡಲಾಗಿತ್ತು. ಲ್ಯಾಂಡ್ ಆದ ಮೇಲೆ ವಿಮಾನದ ಬಾಗಿಲೂ ಕೂಡ ತೆರೆಯಲಿಲ್ಲ. ಆಗ ಪ್ರಯಾಣಿಸುತ್ತಿದ್ದ 70 ಜನರೂ ಮತ್ತಷ್ಟು ಆತಂಕ ಪಟ್ಟಿದ್ದರು.
ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಆದ್ಮೇಲೆ ರೋಜಾ ರಸ್ತೆ ಮಾರ್ಗವಾಗಿಯೇ ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ. ಹಾಗೇನೆ ತಮಗಾದ ಇಂದಿನ ಈ ಅನುಭವವನ್ನ ವೀಡಿಯೋ ಮೂಲಕವೂ ಜನರಿಗೆ ತಿಳಿಸಿದ್ದಾರೆ.
PublicNext
14/12/2021 05:12 pm