ಹೈದರಾಬಾದ್: ನಗರದ ಕೇಬಲ್ ಬ್ರಿಡ್ಜ್ ಮೇಲೆ ನಟ ಸಾಯಿಧರ್ಮ ತೇಜ್ ಅವರ ಬೈಕ್ ಸ್ಕಿಡ್ ಆಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಗಳು ದೊರೆತಿದ್ದು ನಟ ಸಾಯಿಧರ್ಮ ಅಜಾಗರೂಕತೆಯಿಂದ ಹಾಗೂ ವೇಗವಾಗಿ ಬೈಕ್ ಚಲಾಯಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಸುಮಾರು 18 ಲಕ್ಷ ಮೌಲ್ಯದ ಸ್ಪೋರ್ಟ್ಸ್ ಬೈಕ್ ಇದಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ನಟ ಸಾಯಿಧರ್ಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
PublicNext
11/09/2021 12:58 pm