ಕನ್ನಡತಿ ಶ್ರದ್ಧಾ ಶ್ರೀನಾಥ್ ಐಎಎಸ್ ಅಧಿಕಾರಿಯಾಗಿ ಮಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಲೆಯಾಳಂ ಭಾಷೆಯ ಸಿನಿ ತೆರೆಯಿಂದ ಚಂದನವನಕ್ಕೆ ಕಾಲಿಟ್ಟ ದಿನದಿಂದಲೇ ತನ್ನದೆ ಮ್ಯಾನರಿಸಂ ನಟನೆಯ ಮೂಲಕ ಮಿಂಚಿ ಕನ್ನಡವಷ್ಟೇ ಅಲ್ಲದೆ ಬಹುಭಾಷೆಯ ಸಿನಿಮಾಗಳಲ್ಲೂ ಶ್ರದ್ಧಾ ಸೈ ಎನಿಸಿಕೊಂಡಿದ್ದಾರೆ.
ಕನ್ನಡದ ಜೊತೆ ತೆಲುಗು, ತಮಿಳು ಸಿನಿಮಾಗಳಲ್ಲೂ ಗುರುತಿಸಿಕೊಂಡಿರುವ ಶ್ರದ್ಧಾ ಮತ್ತೆ ಮಲೆಯಾಳಂ ಚಿತ್ರದ ಕಡೆ ವಾಲಿರಲಿಲ್ಲ. ಸದ್ಯ ಮತ್ತೀಗ ಸೂಪರ್ ಸ್ಟಾರ್ ಮೋಹನ್ ಲಾಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿ ಬಂದಿದ್ದು, ಈ ಮೊದಲೇ ಸಾಲು ಹಿಟ್ ಸಿನಿಮಾಗಳ ಸಕ್ಸಸ್ ನಿರ್ದೇಶಕ ಬಿ.ಉನ್ನಿಕೃಷ್ಣನ್ ಮತ್ತೆ ಶ್ರದ್ಧಾಗೆ ಡೈರೆಕ್ಷನ್ ಮಾಡಲು ಮುಂದಾಗಿದ್ದಾರೆ.
ಇನ್ನು ಟೈಟಲ್ ಫೈನಲ್ ಆಗದಿರುವ ಈ ಚಿತ್ರ ಪೊಲಿಟಿಕಲ್ ಡ್ರಾಮಾ ಎಂದು ತಿಳಿದು ಬಂದಿದ್ದು, ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಐಎಎಸ್ ಅಧಿಕಾರಿಯಾಗಿ ಪಾತ್ರ ನಿಭಾಯಿಸಲಿದ್ದಾರೆ. ಈ ಮೊದಲು 2015ರಲ್ಲಿ ಮಲಿಯಾಳಂನ 'ಕೊಹಿನೂರ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು 5 ವರ್ಷಗಳ ನಂತರ ಮಲೆಯಾಳಂ ಭಾಷೆಗೆ ಮರಳಿದ್ದಾರೆ.
ಚಿತ್ರದ ಕಥೆ ಕೇಳಿ ಸಂಪೂರ್ಣ ಚಿತ್ರೀಕರಣಕ್ಕೆ ಡೇಟ್ಸ್ ನೀಡಿರುವ ಶ್ರದ್ಧಾ ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ಪಾತ್ರ ಮಾಡುತ್ತಿದ್ದು 18 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಬಹುಭಾಷಾ ಚಿತ್ರ ಎಂದು ಹೇಳಲಾಗುತ್ತಿದೆ.
PublicNext
01/11/2020 10:39 pm