ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ನಂತರ ಚಿತ್ರ ಪ್ರೇಮಿಗಳು ಚಿತ್ರಮಂದಿರ ಶುರು ಆಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಅವರ ನಿರೀಕ್ಷೆ ನಿರಾಸೆಯಾಗುತ್ತಲೇ ಇದೆ. ಈಗ ಮತ್ತೆ ಜನವರಿವರೆಗೂ ಥಿಯೇಟರ್ ತೆರೆಯಲ್ಲ ಎಂದು ಥಿಯೇಟರ್ ಮಾಲೀಕರು ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ.
ಕೊರೊನಾ ಬಳಿಕೆ ಥಿಯೇಟರ್ ತೆರೆಯಲು ಸರ್ಕಾರ ಮಾರ್ಗಸೂಚಿ ಹೊರಡಿಸಿ ಹಲವಾರು ನಿರ್ಭಂಧ ಹೇರಿದೆ. ಈ ಎಲ್ಲ ಷರತ್ತುಗಳಿಗೆ ಚಿತ್ರ ಪ್ರದರ್ಶಕರು ಒಪ್ಪುತ್ತಿಲ್ಲ. ಈ ಷರತ್ತುಗಳ ಪ್ರಕಾರ ನಾವು ಚಿತ್ರ ಪ್ರದರ್ಶನ ಮಾಡಿದರೆ ನಮಗೆ ಕನಿಷ್ಟ ಲಾಭವೂ ಸಿಗಲಾರದು. ಜೊತೆಗೆ ಒಂದು ಪ್ರದರ್ಶನಕ್ಕೆ ತಗುಲುವ ವೆಚ್ಚವನ್ನೂ ನಿಭಾಯಿಸಲಾಗದು ಎಂದು ಚಿತ್ರ ಪ್ರದರ್ಶಕರು ಕೈ ಚೆಲ್ಲಿ ಕೂತಿದ್ದಾರೆ.
ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ ಅಧ್ಯಕ್ಷ ಆರ್ ಆರ್ ಓದುಗೌಡರ ಮಾತನಾಡಿ ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೂ ನಾವು ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ ಎಂದಿದ್ದಾರೆ
ಒಂದೆಡೆ ಲಾಕ್ ಡೌನ್ ನಂತರ ಜನ ಕೂಡ ಥಿಯೇಟರಿನತ್ತ ಬರುತ್ತಿಲ್ಲ. ಹೀಗಾಗಿ ಈಗಾಗಲೇ ತಯಾರಾಗಿರುವ ದೊಡ್ಡ ಮೊತ್ತದ ಹೂಡಿಕೆಯ ಸಿನಿಮಾಗಳನ್ನು ನಿರ್ಮಾಪಕರು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ
PublicNext
31/10/2020 03:16 pm