ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆಗೆ ಸಜ್ಜಾಗುತ್ತಿರುವ ನಟಿ ಕಾಜಲ್ : ಅರಿಶಿಣ ಶಾಸ್ತ್ರದಲ್ಲಿ ಮಿಂಚಿಂಗ್

ಟಾಲಿವುಡ್, ಕಾಲಿವುಡ್ ಸೇರಿದಂತೆ ಹಲವೆಡೆ ಪ್ರೇಕ್ಷಕರ ಕಣ್ಮನ ಸೆಳೆದಿರುವ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಕೊರೊನಾ ಭೀತಿಯ ನಡೆವೆಯೂ ನಟಿ ನಿವಾಸದಲ್ಲಿ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮ ನೆರವೇರಿದೆ.

ಇದರ ಫೋಟೋಗಳನ್ನ ನಟಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉದ್ಯಮಿ ಗೌತಮ್ ಕಿಚ್ಲು ಜೊತೆ ಮುಂಬೈನಲ್ಲಿ ಅಕ್ಟೋಬರ್ 30 ಶುಕ್ರವಾರ ಕಾಜಲ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಸದ್ಯ ಕಾಜಲ್ ಹಾಗೂ ಆಕೆಯ ಸಹೋದರಿ ನಿಶಾ ಅರಿಶಿಣ ಹಾಗೂ ಮೆಹಂದಿ ಸಂಭ್ರಮದ ಫೋಟೋಗಳನ್ನ ಶೇರ್ ಮಾಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೋವಿಡ್ ಭೀತಿ ಇರುವ ಹಿನ್ನೆಲೆ ಕಾಜಲ್ ಅಗರ್ವಾಲ್ ವಿವಾಹ ಸಂಭ್ರಮಕ್ಕೆ ಸಂಬಂಧಿಕರು ಹಾಗೂ ಅತ್ಯಾಪ್ತರಿಗಷ್ಟೇ ಆಮಂತ್ರಣ ನೀಡಲಾಗಿದೆ.

Edited By : Nirmala Aralikatti
PublicNext

PublicNext

29/10/2020 03:14 pm

Cinque Terre

42.14 K

Cinque Terre

1

ಸಂಬಂಧಿತ ಸುದ್ದಿ