ಬೆಂಗಳೂರು : ದಿ.ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ.
ಆ ಮೂಲಕ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ ಇನ್ನೂ ಮೇಘನಾ ಇರುವ ಆಸ್ಪತ್ರೆಗೆ ಭೇಟಿ ನೀಡಿದ ಅರ್ಜುನ್ ಸರ್ಜಾ ಕುಟುಂಬ ಜೂನಿಯರ್ ಚಿರುನನ್ನು ಕಣ್ತುಂಬಿಕೊಂಡು ಸಂತಸಪಟ್ಟಿದ್ದಾರೆ.
ಇದೇ ವೇಳೆ ನಟಿ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮಾಧ್ಯಮಗಳ ಜೊತೆ ಮಗು ಬಗ್ಗೆ ಮಾತನಾಡಿದ್ದು ಜೂ.ಚಿರು ತುಂಬಾ ಕ್ಯೂಟ್ ಆಗಿದ್ದಾನೆ. ಸೇಮ್ ಚಿರು ತರಾನೇ ಇದಾನೆ.
ಒಬ್ಬರಿಂದ ಇನ್ನೊಬ್ಬರಿಗೆ ಸ್ವಲ್ಪ ಬದಲಾವಣೆ ಇರಬಹುದು. ಆದರೆ ಮೂಗು ಮಾತ್ರ ಥೇಟ್ ಅವನ ತರಾನೇ ಇದೆ.
ಈ ಅನುಭವವನ್ನು ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ತುಂಬಾ ಖುಷಿಯಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಚಿರು ನೆನಪು ಸಹ ಬರುತ್ತಿದೆ. ಆದರೆ ಅವನ ಆಶೀರ್ವಾದ ಯಾವಾಗಲೂ ಮಗು ಮೇಲೆ ಇರುತ್ತದೆ ಎಂದರು.
ಈ ಮಗು ತುಂಬಾ ಸ್ಪೆಷಲ್, ಯಾಕಂದ್ರೆ ನಮ್ಮ ಕಟುಂಬದ ಪ್ರೀತಿ ಒಂದುಕಡೆಯಾದರೆ. ಮತ್ತೊಂದು ಕಡೆ ಇಡೀ ಕರ್ನಾಟಕದ ಪ್ರೀತಿ, ಆಶೀರ್ವಾದ ಮಗು ಮೇಲಿದೆ. ತುಂಬಾನೇ ಖುಷಿಯಾಗುತ್ತದೆ ಎಂದು ಐಶ್ವರ್ಯಾ ಹೇಳಿದ್ದಾರೆ.
ಇದೇ ವೇಳೆ ಅರ್ಜುನ್ ಸರ್ಜಾ ಪತ್ನಿ ಆಶಾ ರಾಣಿ ಅಜ್ಜಿ ಆಗಿರೋ ಸಂಭ್ರಮ ಹೇಳೋಕೆ ಆಗಲ್ಲ ಎಂದು ಹೇಳಿದ್ದಾರೆ.
ಸರ್ಜಾ ಕುಟುಂಬ ಸಮೇತರಾಗಿ ಆಸ್ಪತ್ರೆಗೆ ಆಗಮಿಸಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ.
PublicNext
24/10/2020 05:11 pm