ಅಣ್ಣಾವ್ರ ಹಿರಿಯಗ ರಾಘವೇಂದ್ರ ರಾಜಕುಮಾರ್ ಚಿತ್ರರಂಗದಿಂದ ದೂರ ಉಳಿದಿದ್ದರೂ ನಂಜುಂಡಿ ಕಲ್ಯಾಣ ಸ್ವಸ್ತಿಕದಂತಹ ಎವರಗ್ರೀನ್ ಚಿತ್ರಗಳನ್ನ ನಾವು ಮರೆಯೋ ಹಾಗೆ ಇಲ್ಲ ಅಷ್ಟಮಟ್ಟಿಗೆ ಹಾಡಿನ್ ಧ್ವನಿ ಆಕ್ಟಿಂಗ್ ಎಲ್ಲದಕ್ಕೂ ಸೈ ಎಂದಿದ ಆ ಕಾಲದ ನಟ ಇಂದಿಗೂ ಅಷ್ಟೇ ಉತ್ಸಾಹಿ.
ಸದ್ಯ ಮತ್ತೆ ಅವ್ರು ಸಾಂಡಲವುಡ್ ಅಂಗಳಕ್ಕೆ ಕಾಲಿಟ್ರೇ ಹೇಗಿರುತ್ತೆ ಎಂಬ ಕುತೂಹಲಕ್ಕೆ ಈ ಸಿನಿಮಾ ಸಾಕ್ಷಿಯಾಗಲಿದೆ ಅದುವೇ 'ರಾಜತಂತ್ರ' ಹೌದು ರಾಘಣ್ಣ ಅಭಿನಯದ ಈ ಚಿತ್ರ ಶೂಟಿಂಗ್ ಅದ್ಧೂರಿಯಾಗಿ ನಡೆಯುತ್ತಿದ್ದು 'ಅಮ್ಮನ ಮನೆ' ಚಿತ್ರದ ನಂತರ ರಾಘವೇಂದ್ರ ರಾಜಕುಮಾರ್ ನಟನೆಯ ಎರಡನೇ ಚಿತ್ರ ಇದಾಗಿದ್ದು ರಾಘಣ್ಣ ಯೋಧನಾಗಿ ಕಾಣಿಸಿಕೊಳ್ಳಲಿದ್ದು ಈ ಯೋಧನ ಪಾತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾರೆ ಎಂಬುದು ಚಿತ್ರ ಬಿಡುಗಡೆ ನಂತರವೇ ಗೊತ್ತಾಗಬೇಕಿದೆ.
ಈಗಾಗಲೇ ಹಿರಿಯ ನಟ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಹಿರಿಯ ನಟಿ ಭವ್ಯಾ, ಶಂಕರ್ ನೀನಾಸಂ, ಅಶ್ವತ್, ಮುನಿರಾಜು ಪ್ರಮುಖ ಪಾತ್ರಗಳಲ್ಲಿ ಚಿತ್ರಕ್ಕೆ ಜೀವ ತುಂಬಲಿದ್ದಾರೆ. ವಿಶ್ವಂ ಡಿಜಿಟಲ್ ಮೀಡಿಯಾ ಬ್ಯಾನರಿನಲ್ಲಿ ಈ ಸಿನಿಮಾ ಮೂಡಿ ಬರಲಿದೆ ಈ ಚಿತ್ರಕ್ಕೆ ಜೆ.ಎಂ.ಪ್ರಹ್ವಾದ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ ಅಂದಹಾಗೇ ಆಡಿಸಿದಾತ ಸಿನಿಮಾ ಸಹ ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆ ಹಂತದಲ್ಲಿದ್ದು ರಾಜ್ ಕುಟುಂಬದ ಹಿರಿಯಣ್ಣ ಕನ್ನಡಿಗರ ಮನಸ್ಸಿಗೆ ಲಗ್ಗೆ ಇಡಲಿದ್ದಾರೆ.
PublicNext
21/10/2020 11:26 pm